ಎಷ್ಟು ದಿನ ಕಾದೆ
ಎಷ್ಟು ದಿನ ಕಾದೆ
ಕನಸುಗಳ ಹೆಣೆದೆ
ಕಾಣದಾದೆ ನೀನು ಎಲ್ಲೆಲ್ಲೂ.
ನಯವಾದ ನಾದದಲಿ
ನೂಪುರದ ಸದ್ದಿನಲಿ
ಪ್ರಕೃತಿಯ ಚಿತ್ರದಲಿ
ಆಲಯದ ಭಿತ್ತಿಯಲಿ
ರೂಪೊಂದು ರೂಪುಗೊಳ್ಳದೆ
ಕಣ್ಣಲ್ಲಿ ಕಣ್ಣಾಗಿ ಪರಿತಪಿಸಿದೆ.
ದಿನ ದಿನದ ಪಯಣದಲಿ
ನಾನಿರಲು ಹೂವ ಪರಿಮಳದಂತೆ
ನನ್ನಾತ್ಮವನು ಸೂರೆಗೊಂಡೆ.
ಚಿತ್ತದಲಿ ಭಿತ್ತಿಯಾದೆ ನಾ ಭೀಗಲೆಂದು
ಭಾವಕೊಟ್ಟೆ. ಭಾವ ಭಾವ ಸೂರೆಗೊಂಡು
ನಾನಿಲ್ಲವಾದೆ. ಲೀನಗೊಂಡು ಮುಕ್ತಳಾದೆ
ಇದುವೆ ಪ್ರೀತಿ ಪ್ರೇಮ ನಾಮಕೋಟಿಗೆ.
.ಈಗ ನಾನು ನೀನು ಒಂದೆ ಎನಲು
ಭಿನ್ನಜೀವ ಅಲ್ಲವು ಹೆಚ್ಚು ಕಡಿಮೆ
ನಲ್ಮೆ ಒಂದು ಕೂಡಿ ಜೀವ ಒಂದು ಒಲುಮೆ.
-ತಿ. ನ. ಲಕ್ಷ್ಮೀಮಲ್ಲಯ್ಯ