ಅನುದಿನ ಕವನ-೫೭೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, 🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಾವಣ ಸಂಭ್ರಮ….

ಶ್ರಾವಣ ಸಂಭ್ರಮ

ನಾಗರ ಪಂಚಮಿ ನಾಡಿಗೆ ದೊಡ್ಡದು
ಕವಿ ಮನದ ಮನದಾಳದ ನುಡಿ ಇದು
ಸಡಗರದಿ ಬಂತು
ಶ್ರಾವಣ ಸಂಭ್ರಮ
ಮನದೊಳು ತಂತು
ಹರುಷ ಹೊಂಗಿರಣ !

ಸಾಲು – ಸಾಲು ಹಬ್ಬಗಳ ಸಡಗರ
ಶುಕ್ರಗೌರಿ, ಮಂಗಳಗೌರಿಯರ
ಆಚರಣೆಯ ಸಾರ
ಭಕ್ತರು ಬೇಡುವರು ಕರಗಳ ಜೋಡಿಸಿ
ಧೂಪ – ದೀಪ, ಫಲ – ಪುಷ್ಪಗಳಿಂದ ಸಿಂಗರಿಸಿ !

ನಾರಿಯರೆಲ್ಲ ಮಡಿಯನ್ನುಟ್ಟು
ಕಲಶ ಬಿಂದಿಗೆಯ ಪೂಜೆಗೆ ಇಟ್ಟು
ನೈವೇದ್ಯಕೆ ಹಣ್ಣು – ಕಾಯಿ ತಂಬಿಟ್ಟು
ಭಕ್ತಿ ಯಲಿ ಭಜಿಸುವರು ಮನಸ್ಸಿಟ್ಟು !

ಪ್ರತಿವಾರವೂ ದೇವಿಯ ಪೂಜಿಸಿ
ಹರಸು ತಾಯೆ ಕಷ್ಟವ ಮರೆಸಿ
ನಿನ್ನ ಆಶೀರ್ವಾದವೇ
ಮನಕೆ ಹರುಷ
ಮತ್ತೆ ಬಾ ತಾಯೆ
ಪ್ರತಿ ವರುಷ !


-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ
*****