ಕಾಲದ ಪರಿವೆಯನ್ನೇ ಮರೆಸಿದ ಕಾಲಜ್ಞಾನಿ ಕನಕ, ಅವಲೋಕನ: ಹೊಳಗುಂದಿ ಎ.ಎಂ ಪಿ ವೀರೇಶಸ್ವಾಮಿ, ಬಳ್ಳಾರಿ

ರಾಘವರ ಜನ್ನ ದಿನ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆ.೨ರಂದು ಮಂಗಳವಾರ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡ ಕಾಲಜ್ಞಾನಿ ಕನಕ ನಾಟಕವನ್ನು ಅವಲೋಕಿಸಿದ್ದಾರೆ ರಂಗ ಕಲಾವಿದ, ಕನ್ನಡ ಉಪನ್ಯಾಸಕ ಎ.ಎಂ ಪಿ ವೀರೇಶಸ್ವಾಮಿ ಅವರು.
(ಸಂಪಾದಕ)👇

ಕಿ.ರಂ ನಾಗರಾಜರವರು ರಚಿಸಿದ ಕಾಲಜ್ಞಾನಿ ಕನಕ ನಾಟಕವನ್ನು ಸುಮಾರು ಹತ್ತು ವರ್ಷಗಳ ಪರ್ಯಂತ ಪಿ.ಯು.ಮಕ್ಕಳಿಗೆ ಭೋದಿಸಿದ ನನಗೆ ಈ ನಾಟಕವನ್ನು ರಂಗದ ಮೇಲೆ ನೋಡುವ ಕುತೂಹಲ ತುಂಬಾ ದಿನಗಳಿಂದಲೂ ಇತ್ತು . ಆ ಬಹುದಿನದ ಕನಸು ಇಂದು ನನಸಾಯಿತು ನಾನಂತು ಮನದಣಿಯೇ ನೋಡಿ ಸಂತಸಪಟ್ಟೆ
ಲಲಿತ ಕಲಾ ರಂಗ ಮರಿಯಮ್ಮನಹಳ್ಳಿಯವರು ಈ ನಾಟಕವನ್ನು ತುಂಬಾ ಸೊಗಸಾಗಿ ಪ್ರಸ್ತುತ ಪಡಿಸಿದರು ಎಲ್ಲಾ ಕಲಾವಿದರಿಗೆ ನಮೋ ನಮಃ.
ನಾಟಕದ ಕಥಾ ಹಂದರ
ಸತ್ಯವಂತರ ಸಂಘವಿರಲು ತೀರ್ಥ ಯಾತಕೆ-ಎಂಬ ಕನಕರ ಹಾಡು ,ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಕು.ರಚನಾ ಮಾಲಿನಿ ಲೀಲಾವತಿ ಹಾಗು ಸಂಗಡಿಗರ ಕುಣಿತದಿಂದ ಉ್ತಮ ಆರಂಭವನ್ನು ಮಾಡಿತು ಯುದ್ದದ ಸನ್ನಿವೇಶ ಕಾಲಜ್ಞಾನ ದಲ್ಲಿ ಮುಂದಾಗುವ ಅನಾಹುತಗಳ ಪರಿಚಯ.
ಕನಕನ ಸ್ವಾಗತದ ಹಾಡು (ದೇವೀ ನಮ್ಮ ದ್ಯಾವರು ಬಂದರು ಬನ್ನಿರೇ ) ಈ ಎಲ್ಲಾ ಸನ್ನಿವೇಶಗಳು ನಾಟಕಕ್ಕೆ ಉತ್ತಮ ಪೀಠಿಕೆ ಹಾಕಿದವು .
ಕನಕನ ಸ್ವಗತದ ನುಡಿಗಳು
ಕನಕ ಮತ್ತು ಪ್ರಜೆಗಳ ನಡುವಿನ ಸಂಭಾಷಣೆ ಸ್ವಲ್ಪ ಲಂಬಿಸಿತು ಕನಕ ಅರಮನೆ ತೊರೆದ ಸನ್ನವೇಶ ಅದಕ್ಕೆ ಹಿನ್ನಲೆಯಾಗಿ ಬಳಸಿದ ಹಾಡು ನಿನ್ನಂತಾಗತಾಗ ಬೇಕೋ ಕನಕ ನಿನಂತಾಗಬೇಕೋ ಸಮಂಜಸ ಹಾಗು ಅರ್ಥ ಪೂರ್ಣವಾಗಿತ್ತು.


ಕನಕ ಸಂಸಾರ ತ್ಯಜಿಸಿದ ದೃಶ್ಯ ಆ ಸಂಭಾಷಣೆ ಅಚ್ಚುಕಟ್ಟಾಗಿತ್ತು ಕನಕನ ತಾಯಿ ಪಾತ್ರ
ನಿರ್ವಹಿಸಿದ ಶಾರದಮ್ಮ ರಾಣಿಯ ಪಾತ್ರ ನಿರ್ವಹಿಸಿದ ಕೆ ಸರ್ವಮಂಗಳ ಇವರು ತಮ್ಮಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದರು ತಾಯಿ ಪಾತ್ರಕ್ಕೆಇನ್ನಷ್ಷು ವಸ್ತ್ರಾಲಂಕಾರ ಬೇಕೆನಿಸಿತ್ತು. ಕನಕ ಲೋಕ ಸಂಚಾರಿಯಾಗಿ ಹೊರಟಾಗ ಬಳಸಿದ ಹಾಡು ತಲ್ಲಣಿಸದಿರು ಕಂಡ್ಯಾ ತಾಳು ಮನವೇ ಇದು ಕನಕನ ಮಾತೆ ಮತ್ತು ಮಡದಿಗೆ ಸಮಾದಾನ ಹೇಳುವ ನುಡಿಮುತ್ತಿನಂತಿತ್ತು.
ಕನಕನನ್ನು ಗ್ರಾಮಸ್ತರು ಹುಡುಕುವ ಸನ್ನಿವೇಶ
ಕನಕ ಮತ್ತು ಗ್ರಾಮಸ್ತರೊಂದಿಗೆ ಸಂಭಾಷಣೆ. ತುಂಬಾ ಅರ್ಥಪೂರ್ಣವಾಗಿತ್ತು.ಜಪವ ಮಾಡಿದರೇನು ತಪವ ಮಾಡಿದರೇನು ಎನ್ನುವ ಹಿನ್ನಲೆ ಹಾಡು ಈ ಸನ್ನಿವೇಶಕ್ಕೆ ಕಲಶವಿಟ್ಟಂತಿತ್ತು.


ಪಂಡಿತರು ಕನಕನ ಮನೆಗೆ ಬಂದದ್ದು ಅವರ ನಡುವಿನ ಸಂಭಾಷಣೆ.ಕನಕನನ್ನು ಪರೀಕ್ಷೆಗೆ ಆಹ್ವಾನಿಸಿದ ರೀತಿ ಪಂಡಿತರ ಪಾತ್ರ ನಿರ್ವಹಿಸಿದ ಹ್ಯಾಟಿ ಮಂಜುನಾಥ ಜಿ ಸೋಮಶೇಖರ ,ಮಡಿವಾಳಪ್ಪ ಮಂಜುನಾಥ ಇವರ ಹಾಸ್ಯಮಿಶ್ರಿತ ಹಾವ ಬಾವ ವ್ಯಂಗ್ಯದ ನುಡಿಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು .
ಪಂಡಿತರ ಸಭೆಯಲ್ಲಿ. ಅಕ್ಕಿ ರಾಗಿಯ ಕುರಿತು ಸಂಭಾಷಣೆ ಪ್ರಬುದ್ದವಾಗಿತ್ತು ಕನಕನ ಪಾತ್ರ ನಿರ್ವಹಿಸಿದ ಕೆ ಮಲ್ಲನಗೌಡರ ಅಬಿನಯ ತುಂಬಾ ಸೊಗಸಾಗಿತ್ತು ಹಳ್ಳು ಉರಿದಂತೆ ಪಟಪಟ ಮಾತನಾಡುವ ಅವರ ಸಂಭಾಷಣೆಯ ಚತುರತೆಗೆ ಪ್ರೇಕ್ಷಕರ ಚಪ್ಪಾಳೆ ಸಾಕ್ಷಿಯಾಗಿತ್ತು.
“ನಾನು ನೀನು ಎನ್ನದಿರು ಹೀನ ಮಾನವ
ಜ್ಞಾನದಿಂದ ನಿನ್ನ ನೀನು ತಿಳಿದು ನೋಡಯ್ಯಾ” ಈ ಹಾಡು ಪಂಡಿತರ ಅಹಂಕಾರಕ್ಕೆ ಮಂಗಳಾರತಿ ಮಾಡಿದಂತಿತ್ತು.
ಗ್ರಾಮಸ್ಥರ ಪಾತ್ರ ನಿರ್ವಹಿಸಿದ ನಾಟಕದ ನಿರ್ದೇಶಕರಾದ ಸಿ.ಕೆ ನಾಗರಾಜ, ಕಟ್ಟೆ ಉಮೇಶ ನಾರಾಯಣ ಹಾಗು ಜಿ ಸೋಮಣ್ಣ ಇವರೆಲ್ಲ ತಮ್ಮ ಪಾರ್ತಕ್ಕೆ ಬೇಕಾದ ಎಲ್ಲ ಶಕ್ತಿ ತುಂಬಿದರು ಹಿರಿಯರಾದ ಸೋಮಣ್ಣ ತಮ್ಮ೬೦ ರ ಇಳಿವಯಸ್ಸಿನಲ್ಲಿ ಕೂಡ ರಂಗದ ಮೇಲೆ ಅವರ ತೋರಿದ ಕ್ರಿಯಾಶೀಲತೆ ನಮಗೊಂದು ಮಾದರಿಯಾಗಿದೆ. ಕನಕನೊಡನೆ
ದೇವಸ್ಥಾನ ಪ್ರವೇಶ ಕುರಿತಂತೆ ಚರ್ಚೆ ಸಮಯೋಚಿತವಾಗಿತ್ತು.
ನೀ ಮಾಯೆಯೋ ನಿನ್ನಳೊಗು ಮಾಯೆಯೋ ಕೀರ್ತನೆ ಬಳಕೆ ಅರ್ಥಪೂರ್ಣ.
ವ್ಯಾಸಸಭೆಯಲ್ಲಿ ಪುರಂದರ ಹಾಗು ವ್ಯಾಸರು
ವ್ಯಾಸಕೂಟ ದಾಸಕೂಟಗಳ ಬೇಧಭಾವಗಳ ಕುರಿತು ಸಂಭಾಷಣೆ. ಪಂಡಿತರು ಕನಕನನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಚು
ಬಾಳೆಹಣ್ಣನ್ನು ಮರೆಯಲ್ಲಿ ತಿಂದು ಬರುವುದು ಈ ಎಲ್ಲಾ ಸನ್ನಿವೇಶಗಳಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತಿತ್ತು. ಪುರಂದರರ ಪಾತ್ರ ನಿರ್ವಹಿಸಿದ ಜಿ.ಮಲ್ಲಪ್ಪನವರ ಸಂಭಾಷಣೆ ಸ್ಪಷ್ವ ಮತ್ತು ಅಸ್ಕಾಲಿತ್ಯವಾಗಿತ್ತು. ವೇಷ ಭೂಷಣ ಪುರಂದರರ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ವ್ಯಾಸರ ಪಾತ್ರ ನಿರ್ವಹಿಸಿದ ಜಿ.ಎಂ.ಕೊಟ್ರೇಶ್ ಅವರು ತಮ್ಮಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ ದ್ವನಿ ಇನ್ನಷ್ಟು ಸ್ಪಷ್ಟವಾಗಬೇಕು.
ಬಾಗಿಲನು ತೆರೆದು ಸೇವೆಯನ್ನ ಕೊಡು ಹರಿಯೇ ಕೀರ್ತನೆ
ಕೇಶವನನ್ನು ದೇವಸ್ಥಾನ ದಿಂದ ಹೊರ ಬರುವಂತೆ ಮಾಡಿತು.
ದೇವಸ್ಥಾನದಲ್ಲಿ ಬಂದಿಯಾಗಿದ್ದ ಕೇಶವನನ್ನು ಬಯಲಲ್ಲಿ ಬಯಲಾಗಿಸಿದ ಸನ್ನಿವೇಶ ಮನೋಜ್ಞವಾಗಿತ್ತು. ಕೇಶವನ ಪಾತ್ರ ನಿರ್ವಹಿಸಿದ ಕು.ಅಕ್ಷರ ದೇವನಕೊಂಡ ಸರಾಗವಾಗಿ ಸಂಭಾಷಣೆ ಹೇಳಿಕೊಂಡು ಮುದ್ದು ಮುದ್ದಾಗಿ ನಟಿಸಿದ.
ಒಟ್ಟಾರೆ ನಾಟಕ ಮೂರು ಘಂಟೆಗಳ ಕಾಲ ಪ್ರೇಕ್ಷಕರು ಕಾಲದ ಪರಿವೆ ಇಲ್ಲದೆ ಕಾಲಜ್ಞಾನಿ ಕನಕ ನಾಟಕ ವೀಕ್ಷಸಿದರೆಂದರೆ ನಾಟಕ ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ದೆ ಎಂತಲೇ ಅರ್ಥ.

ನಾಟಕದ ಪರಿಕರ, ಹಿನ್ನಲೆ ಸಂಗೀತ ಪ್ರಸಾದನ

ನಾಟಕಕ್ಕೆ ಬಳಸಿದ ಪರಿಕರಗಳು ಅವುಗಳ ಬಳಕೆ ಸಮಯೋಚಿತ ವಾಗಿತ್ತು. ಹಿನ್ನಲೆ ಹಾಡುಗಳೇ ನಾಟಕದ ಜೀವಾಳವಾಗಿದ್ದವು ಸುಶ್ರಾವ್ಯವಾಗಿ ಹಾಡಿ ಇಡೀ ಕಲಾ ಮಂದಿರವನ್ನ ಗಂದರ್ವ ಲೋಕವನ್ನಾಗಿಸಿದ ಕರಣಂ ಸಂತೋಷರವರಿಗೆ ಅದೆಷ್ಟು ವಂದನೆ ಹೇಳಿದರೂ ಸಾಲದು.
ತಬಲ ಸಾಥ್ ನೀಡಿದ: ಮೌನೇಶ್ ಬಡಿಗೇರ್ ಅವರಿಗು ಕ್ಯಾಷಿಯೋ ನುಡಿಸಿದ ನಾಗರಾಜರವರಿಗೆ ಅಭಿನಂದನೆ ನಾಟಕದ ಪಾತ್ರದಾರಿಗಳ ಉಡುಪು ಪ್ರಸಾದನ  ಸೂಕ್ತವಾಗಿತ್ತು ಪಾತ್ರಕ್ಕೆ ತಕ್ಕಂತೆ ವೇಷ ಭೂಷಣ ತೊಡಿಸಿ ಮುಖಕೆ ಬಣ್ಣ ಹಚ್ಚಿ ಪಾತ್ರಗಳು ವಿಜೃಂಬಿಸುವಂತೆ ಮಾಡಿದ ಯುವ ರಂಗಕರ್ಮಿ ಸರದಾರ ಬಾರಿಗಿಡದ ಅವರ ತೆರೆಯ ಮರೆಯ ಪಾತ್ರ ಬಹು ಮುಖ್ಯವಾಗಿದೆ.ಕನಕನ ಪಾತ್ರಕ್ಕೆ ಕೊನೆಯ ಸನ್ನಿವೇಶಕ್ಕೆ ಪ್ರಸಾದನ ಬೇರೆಯಾಗಬೇಕಿತ್ತು.
ನಿರ್ದೇಶಕರ ಕುರಿತು:


ಈ ನಾಟಕದ ಸಂಪೂರ್ಣ ಯಶಸ್ಸು ನಿರ್ಧೇಶಕ ಸಿ.ಕೆ ನಾಗರಾಜರವರಿಗೆ ಸಲ್ಲಬೇಕು ಸತತ ಎರಡು ತಿಂಗಳು ಈ ಕಲಾವಿದರಿಗೆ ನಟನೆಯ ಪಾಠ ಹೇಳಿಕೊಡುತ್ತಾ ತಾವು ಪಾತ್ರದಾರಿಯಾಗಿ ಅಬಿನಯಿಸುವುದು ಸಣ್ಣ ಮಾತಲ್ಲ ವೃತ್ತಿ ಯಿಂದ ಪತ್ರಕರ್ತರಾಗಿ ಬಿಡುವಿನ ವೇಳೆಯಲ್ಲಿ ಇಂಥದೊಂದು ನಾಟಕ ನಿರ್ದೇಶನ ಮಾಡಿ ಸೈ ಎನಿಸಿ ಕೊಳ್ಳುವುದು ಸುಲಭದ ಮಾತಲ್ಲ ಆದರೆ ನಾಗರಾಜರವರು ತಮ್ಮ ಕ್ರಿಯಾಶೀಲತೆ ಬದ್ದತೆ ಹಾಗು ವಿನಯತೆಯಿಂದ ಇದರಲ್ಲಿ ಗೆಲವು ಪಡೆದಿದ್ದಾರೆ ಎಂತಲೇ ಹೇಳಬೇಕು.
ದ್ವನಿ ಬೆಳಕು ನಾಟಕದ ಯಶಸ್ಸಿನ ಇನ್ನೊಂದು ಮುಖವೆಂದರೆ ದ್ವನಿ ಮತ್ತು ಬೆಳಕು ಇದು ಸರಿಯಾಗಿರದಿದ್ದರೆ ನಾಟಕ ಸೋಲುತ್ತದೆ ಆದರೆ
ದ್ವನಿ ಬೆಳಕಿನ ಜವಬ್ದಾರಿ ಹೊತ್ತ ರಸೂಲ್ ಸಾಹೇಬರು ಅದನ್ನು ಸಮರ್ಥವಾಗಿ ನಿರ್ವಹಿಸಿ ನಾಟಕ ಯಶಸ್ವಿಯಾಗಲು ಸಹಕರಿಸಿದ್ದಾರೆ.
ಸಂಸ್ಥಾಪಕರ ಕುರಿತು.
ಇದೆಲ್ಲಾ ಒಂದು ತೂಕವಾದರೆ ಕಲಾವಿದರನ್ನು ಸಂಘಟಿಸಿ ಸಂಸ್ಥೆಯನ್ನು ಕಟ್ಟಿ ಅದನ್ನು ಮೂವತ್ತೈದು ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬರುವುದು ಸಾಹಸದ ಕೆಲಸ ಇದಕ್ಕೆ ತಾಳ್ಮೆ ಜಾಣ್ಮೆ ಕಲಾ ಪ್ರ್ರೀತಿ ನೀತಿ ಬದ್ದತೆ ಇವುಗಳೆಲ್ಲವೂ ಬೇಕಾಗುತ್ತದೆ ಆ ಗುಣಗಳೇ ಮೈವೆತ್ತಂತಿರುವ ಈ ಲಲಿತಾ ಕಲಾ ರಂಗದ ಸಂಸ್ಥಾಪಕರು ಹಿರಿಯ ರಂಗ ಕಲಾವಿದರು ನಿರ್ದೇಶಕ ರಾದ ಶ್ರೀ ಮ.ಬ ಸೋಮಣ್ಣ ಸರ್ ಇವರಿಗೆ ಬಳ್ಳಾರಿಯ ಎಲ್ಲಾ ರಂಗ ಕಲಾವಿದರ ಪರವಾಗಿ ವಂದನೆ ಅಭಿನಂದನೆ.

-ಎ.ಎಂ ಪಿ ವೀರೇಶಸ್ವಾಮಿ
ಹೊಳಗುಂದಿ
*****