ಪ್ರಕಾಶ್ ಕಂದಕೂರುರ `ಯೆಲ್ಲೋ ಬಿಲೀವರ್ಸ್’ ಗೆ ಐಸಿಪಿಇ ಚಿನ್ನದ ಪದಕ

ಕೊಪ್ಪಳ: ಸಿಂಗಪೂರದಲ್ಲಿ ನಡೆದ ಸಿಂಗಪೂರ ಫೊಟೋ ಸರ್ಕ್ಯೂಟ್-2022 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪಧೆಯಲ್ಲಿ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಕ್ಲಿಕ್ಕಿಸಿದ್ದ `ಯೆಲ್ಲೋ ಬಿಲೀವರ್ಸ್’ ಶೀರ್ಷಿಕೆಯ ಚಿತ್ರ `ಇಂಟರ್‍ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್'(ICPE Gold Medal)ನ ಚಿನ್ನದ ಪದಕ ಪಡೆದುಕೊಂಡಿದೆ.


ಸ್ಪರ್ಧೆಯ ಕಲರ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ ಈ ಚಿತ್ರವನ್ನು ಬೆಳಗಾವಿ ಜಿಲ್ಲೆ ಕೇರೂರಿನ ಅರಣ್ಯ ಸಿದ್ಧೇಶ್ವರ ಜಾತ್ರೆಯಲ್ಲಿ ಸೆರೆಹಿಡಿಯಲಾಗಿದೆ‌ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.
ಕಾರಣಿಕ ಕೇಳಲು ಕೌತುಕರಾಗಿ ಒಂದೆಡೆ ಕುಳಿತಿರುವ ಭಂಡಾರದಲ್ಲಿ ಮಿಂದೆದ್ದ ಭಕ್ತರನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಆ.20 ರಂದು ಸಿಂಗಪೂರದ ಫಾರ್ಚ್ಯೂನ್ ಸೆಂಟರ್ ನಲ್ಲಿ ಪ್ರಶಸ್ತಿ ವಿಜೇತ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
*****