ಅನುದಿನ ಕವನ-೫೮೫, ಕವಿ: ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು, ಕವನದ ಶೀರ್ಷಿಕೆ: ಸಂತ

ಸಂತ

ನೆನಪಿನ
ತೀವ್ರ ನಿಗಾ ಘಟಕದಲ್ಲಿ
ಚಿಕಿತ್ಸೆ.
ಅರಿತವರಷ್ಟೇ
ಹೃದಯದ ಬಾಗಿಲಲ್ಲಿ
ಗಾಜಿನ ತಡೆಗೋಡೆಗಿಲ್ಲಿ
ಎತ್ತರದ ಸಮಸ್ಯೆ
ಹೆಬ್ಬೆರಳು ತುದಿಯಲ್ಲೇ
ವೀಕ್ಷಣೆ
ಕಣ್ತುಂಬುತ್ತವೆ
ಒಡನಾಟದ
ಎದೆಯ ಮಿಡಿತಕ್ಕೆ

ಎದೆಗೆ ಇರಿದ
ಬದುಕು
ಮುರಿದ
ಜೀವಕ್ಕಾಗಿಯೇ
ಮೀಸಲಿರಿಸಿದ ಸಂತನೆಂಬ
ಪಟ್ಟ

ಉಳಿವಿಗಿಲ್ಲಿ ದೇವರ ದಯೆ
ಎಂಬ ಅರ್ಧ ಭರವಸೆಯ
ಮಾತುಗಳು
ಉಳಿದರೂ ಉಳಿವು
ಅದೇ
ಜೀವಕ್ಕಾಗಿ ಎಂಬ
ಪಿಸು ಮಾತುಗಳು

ಮುಚ್ಚಿದ್ದರೂ
ಕಂಗಳು
ಎದೆಯ ಭಾವಕ್ಕಿಲ್ಲಿ
ಸೆಳೆತ ಎಲ್ಲವೂ
ಸ್ಪಷ್ಟ ಅರ್ಥ

ಬಿಳಿ ಹೊದಿಕೆಗೆ
ಕುಸುಮವು
ನೋಯುತ್ತದೆ
ಮತ್ತೇ ಸಂತನಾಗಿ
ಹುಟ್ಟಲು
ಕೊನೆ ಆಸೆ
ತಿಳಿಸುತ್ತದೆ.


-ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು          *****