ನಾಡೋಜ ಬರ‍್ರಕಥಾ ದರೋಜಿ ಈರಮ್ಮ ಕನ್ನಡ ನಾಡಿನ ಅಪ್ರತಿಮ ಸಾಧಕಿ -ಸಂಡೂರು ತಹಶಿಲ್ದಾರ್ ಕೆ ಎಂ‌ ಗುರುಬಸವರಾಜ್

ಸಂಡೂರು, ಆ.12: ನಾಡೋಜ ಬರ‍್ರಕಥಾ ದರೋಜಿ ಈರಮ್ಮ ಈ ನಾಡು ಕಂಡ ಅಪ್ರತಿಮ ಸಾಧಕಿ ಎಂದು
ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ಕೆ ಎಂ ಗುರುಬಸವರಾಜು ಅವರು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹಳೇ ದರೋಜಿ‌ ಗ್ರಾಮದಲ್ಲಿ ನಾಡೋಜ ಬುರ್ರಕಥಾ ಈರಮ್ಮ ಅವರ 8ನೇ ಪುಣ್ಯಸ್ಮರಣೆ ಅಂಗವಾಗಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಕಲಾಪ್ರದರ್ಶನ ಹಾಗೂ‌ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ದರೋಜಿ ಗ್ರಾಮವನ್ನು ದಿಲ್ಲಿಯವರೆಗೂ ಪರಿಚಯಿಸಿದ ಕೀರ್ತಿ ಅವರಿಗೆ ಬುರ್ರಕಥಾ ಈರಮ್ಮ‌ಅವರಿಗೂ ಸಲ್ಲುತ್ತದೆ. ರಾಷ್ಟ್ರಪತಿ ಭವನದಲ್ಲಿಯೂ ಕಾರ್ಯಕ್ರಮ‌ ನೀಡಿದ ಮಹಾನ್ ಚೇತನ‌ ಎಂದು ಕೊಂಡಾಡಿದರು.
ನಶಿಸುತ್ತಿರುವ ಬುರ್ರಕಥಾದಂತಹ ಅಪರೂಪದ ಕಲೆಗಳು ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಡಾ ಅಶ್ವ ರಾಮು ಅವರು ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ (ರಿ) ಸಂಸ್ಥೆಯು ಪ್ರತಿವರ್ಷ ರಾಷ್ಟೀಯ ಅಂತಾರಾಷ್ಟೀಯ ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು. ವಿಶೇಷವಾಗಿ ಕೊಡುಗು ನೆರೆಹಾವಳಿ ಸಂದರ್ಭದಲ್ಲಿ ವೇಷಗಳನ್ನು ಹಾಕೊಕೊಂಡು ಭಿಕ್ಷಾಟನೆ ಮಾಡಿ ಹಣಸಂಗ್ರಹಿಸಿ ದೇಣಿಗೆ ನೀಡಲಾಯಿತು. ಮತ್ತು ಕರೋನಾ ಸಂದರ್ಭದಲ್ಲಿ ವೇಷಗಳನ್ನು ಹಾಕೊಕೊಂಡು ಬೀದಿಯಲ್ಲಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಸಲಾಗಿದೆ. ನಾಡು ನುಡಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಸದಾ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಜಾನಪದ ಲೋಕದ ಸಿರಿ ದರೋಜಿ ಈರಮ್ಮ ಸ್ಮಾರಕ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು‌ ವಿಷಾಧಿಸಿದರು. ಜಿಲ್ಲೆಯ ಸಚಿವರು, ಸಂಸದರು ಹಾಗೂ ಶಾಸಕರು ನೀಡಿದ ಆಶ್ವಾಸನೆಗಳಾದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಡೋಜ ಬರ‍್ರಕಥಾ ದರೋಜಿ ಈರಮ್ಮನ ಅಧ್ಯಯನ ಪೀಠ‌ ಸ್ಥಾಪನೆ, ಈರಮ್ಮನವರು ಬಳಸುತ್ತಿದ್ದ ವಾದ್ಯ ಪರಿಕರಗಳು ಸೇರಿದಂತೆ ಅವರು ಹಾಡಿರುವ ಪುಸ್ತಕಗಳು, ಪ್ರಶಸ್ತಿ ಫಲಕಗಳನ್ನು ಸಂಗ್ರಹಿಸಿಡಲು ಅನುಕೂಲವಾಗುವ ಸಾಂಸ್ಕೃತಿಕ ಸಮುಚ್ಚಯ (500 ಜನ ಕೂಡುವಂತಹ ಓಳಾಂಗಣ ರಂಗಮಂದಿರ, ಅಲೆಮಾರಿ ಕಲಾ ಹಾಗೂ ಬರ‍್ರಕಥಾ ತರಬೇತಿ ಕೇಂದ್ರ, ಅತಿಥಿ ನಿವಾಸ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಉದ್ಯಾನವನ, ಸಮಾಧಿ ಅಭಿವೃದ್ಧಿ, ದ್ವಾರಬಾಗಿಲು, ನೀರಿನ ಟ್ಯಾಂಕ್) ಇನ್ನೂ ನೆರೆವೇರಿಲ್ಲ ಎಂದು ಗಮನ ಸೆಳೆದರು.
ಎಂಟು ವರ್ಷಗಳ ಹಿಂದೆ ಸಂಡೂರು ಶಾಸಕರು ನೀಡಿದ್ದ ಕಂಚಿನ ಪುತ್ತಳಿಯನ್ನು ನಿರ್ಮಿಸುವೆ ಎಂದು ಹೇಳಿದ್ದ ಭರವಸೆ ಈಡೇರ ಬೇಕಿದೆ ಎಂದು ಡಾ.ರಾಮು ಒತ್ತಾಯಿಸಿದರು.


ಸನ್ಮಾನ: ಸತತ ೩೯ ವರ್ಷಗಳ ಕಾಲ ವರ್ಗಾವಣೆಯಾಗದೇ ಒಂದೇ ಶಾಲೆಯಲ್ಲಿ ಸಹಶಿಕ್ಷಕರಾಗಿ ಬಡ್ತಿ ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿದ ಜೆ ಲೋಕಪ್ಪ ಅವರಿಗೆ ಇದೇ ಸಂದರ್ಭದಲ್ಲಿ‌ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೆ ಲೋಕಪ್ಪ ಅವರು ಶಾಲಾ ಪಠ್ಯಪುಸ್ತಕಗಳಲ್ಲಿ ದರೋಜಿ ಈರಮ್ಮ ಅವರ ಬದುಕು ಹೋರಾಟದ ಕುರಿತ ಪಠ್ಯ ಸೇರ್ಪಡೆಯಾಗ ಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ ಕೆ ಎಂ ಗುರುಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮಪಂಚಾಯಿತಿ ಅಧ್ಯಕ್ಷ ಎಮ್ಮೆ ಗಂಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಆರ್ ರಾಮಪ್ಪ, ದರೋಜಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಪ್ರಭುವನಗೌಡ, ಪಂಚಾಯಿತಿ ಸದಸ್ಯರಾದ ಸರೋಜ ತಿಮ್ಮಪ್ಪ, ಮಾಯಣ್ಣ,  ರ‍್ರಿಸ್ವಾಮಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ, ಬರ‍್ರಕಥಾ ಶಿವಮ್ಮ, ಹಿರಿಯ ಕಲಾವಿದರಾದ ಗಂಗಾಧರಪ್ಪ ಯಡವಲಿ, ಶಿಕ್ಷಕ ಜೆ ಲೋಕಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಮಲ್ಲಿಕಾರ್ಜುನ, ಸಹ ಶಿಕ್ಷಕರಾದ ಬಸಮ್ಮ, ಕೋಷ್ಟಿ, ಶ್ರೀನಿವಾಸ, ಕಲಾವಿದ ದೊಡ್ಡಲಾಲಪ್ಪ, ದೊಡ್ಡ ಗಾದಿಲಿಂಗಪ್ಪ, ಹುಸೇನಿ, ಅಶ್ವ ಸುರೇಶ, ಜಿ ತಿಪ್ಪೇಸ್ವಾಮಿ, ಜಿ ವೀರೇಶ, ಬಿ ಬಸವರಾಜ ಉಪಸ್ಥಿತರಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಶ್ವ ನಾಗರಾಜ ವಂದಿಸಿದರು.


ಕಲಾ ಪ್ರದರ್ಶನ: ಶ್ರೀಮತಿ ಶಿವಮ್ಮ ಮತ್ತು ತಂಡದವರಿಂದ ಬರ‍್ರಕಥಾ, ಮೌನೇಶ ಮತ್ತು ತಂಡದವರಿಂದ ತತ್ವಪದಗಾಯನ, ಸಾಲಮ್ಮ ಮತ್ತು ತಂಡದವರಿಂದ ಗಂಗಿಗೌರಿ ಗಾಯನ, ಬಾರಿಕರ ಈರಮ್ಮ ಮತ್ತು ತಂಡದವರಿಂದ ಜೋಕುಮಾರನ ಪದಗಳು, ದೊಡ್ಡಮಾರೆಪ್ಪ ಮತ್ತು ತಂಡದವರಿಂದ ತತ್ವಪದಗಾಯನ, ಅಶ್ವ ರಾಮಣ್ಣ ಮತ್ತು ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ಮನಸೋರೆಗೊಂಡಿತು.


*****