ಶಿಲಾಬಾಲಿಕೆ
ಏನೆಂದು ವರ್ಣಿಸಲಿ !
ನಿನ್ನ……. ಗೆಳತಿ
ಯಾವ ಸೌಂದರ್ಯದ
ಹೋಲಿಕೆ ಮಾಡಲಿ !
ನಿನ್ನ ಸುಂದರ ಮೊಗವನ್ನು
ಬೆಳದಿಂಗಳ ಚಂದ್ರನಿಗೆ
ಹೋಲಿಸಲೇ……?
ಚಂದ್ರ ರಾತ್ರಿ ಕಳೆದು
ಬೆಳಗು ಸರಿದು ಹೋಗುವುದು //
ನಿನ್ನ ಸುಂದರ ನಗುವನ್ನು
ಅರಳಿದ ಹೂಗಳಿಗೆ
ಹೋಲಿಸಲೇ…..?
ಚುಮು – ಚುಮು ಮುಂಜಾವದಲಿ ಅರಳಿ
ಸಂಜೆ ನೆಲ ಸೇರುವುದು //
ನಿನ್ನ ಸುಂದರ ಸ್ವರವನ್ನು
ಝುಳು – ಝುಳು ಹರಿಯುವ ನದಿಗೆ
ಹೋಲಿಸಲೇ…..?
ಬಿರು ಬೇಸಿಗೆಯಲ್ಲಿ ನೀರು ಬತ್ತಿ
ನೆಲ ಬಿರುಕು ಬಿಡುವುದು //
ನಿನ್ನ ಸುಂದರ ಮನಸನ್ನು
ಅಮೃತದಂತ ಹಾಲಿಗೆ
ಹೋಲಿಸಲೇ…….?
ಹಾಲು ತಡೆಯದೇ
ಒಡೆದು ಹೋಗುವುದು //
ನಿನ್ನ ಸುಂದರ ಮೈ ಬಣ್ಣವನ್ನು
ಶುಭ್ರವಾದ ಬಿಳಿ ಮೋಡಕ್ಕೆ
ಹೋಲಿಸಲೇ……?
ಹೋಲಿಕೆಯೇ ಬೇಡಾ ಗೆಳತಿ
ನಿನಗೆ ನೀನೇ ಹೋಲಿಕೆ !
ಮದನಿಕೆ
ನೀನೇ ನನ್ನ ಶಿಲಾಬಾಲಿಕೆ //
ಈ ನಿನ್ನ ಸ್ನಿಗ್ಧ ಸೌಂದರ್ಯವನ್ನು
ನನ್ನ ಕಣ್ರೆಪ್ಪೆಯೊಳಗೆ
ಹೃದಯದ ಕೋಟೆಯೊಳಗೆ
ಮುತ್ತು ಚಿಪ್ಪಿನೊಳಗಿರುವಂತೆ
ಕಾಯುವೆ, ಕಾಪಾಡುವೆ //
ಎನ್ನ ಮನೆಯ ಬಾಗಿಲು
ನಿನಗಾಗಿ ತೆರೆದಿರುವೆ
ಬಲಗಾಲಿಟ್ಟು ಬಾ ಒಳಗೆ
ಕಾಯುತಿಹೆನು ನಾನು
ನೀ ಬರುವ ಘಳಿಗೆ //
-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****