ಅನುದಿನ ಕವನ-೬೦೪, ಕವಯತ್ರಿ: ಅನ್ನಪೂರ್ಣ ಪದ್ಮಶಾಲಿ, ಕೊಪ್ಪಳ, ಕವನದ ಶೀರ್ಷಿಕೆ: ವಾಸ್ತು ತೊರೆದ ವಾಸ್ತವ

ವಾಸ್ತು ತೊರೆದ ವಾಸ್ತವ

ವಿಜ್ಞಾನ ಜಗತ್ತು
ಜ್ಞಾನವಂತರ ಸೊತ್ತು
ಬಿಡು ನೀ ವಾಸ್ತು… ವಾಸ್ತು.
ವೈಜ್ಞಾನಿಕ ಮನೋಭಾವ ಅರಿತು!

ಸಿಲುಕದಿರು, ಅಂಜದಿರು
ವಾಸ್ತುವಿನ ಭಯಕ್ಕೆ.,!
ಭೂಗೋಳವಿದು,
ಭೂಮ್ಯಾಕಾರವಾಗಿದೆ..!!!
ಭೂಮಿಗಿದೆಯೇ ವಾಸ್ತು..??

ದಿನದಿನವೂ
ಕ್ಷೀಣಿಸುತ್ತಿದೆ
ಶಾಂತಿಯ ಮನಸ್ಸು
ಜನಮನದಿ ಬರಿ
ಒಳಸಂಚು ವೈಮನಸ್ಸು

ನೀ ಶಾಂತಿಯಿಂದಿರೆ..
ಮನೆ ಇದು ಅರಮನೆ
ನೀ ಅಶಾಂತಿಯಿಂದರೆ
ಮನೆ ಆಗುವುದು ಸೆರೆಮನೆ

ತಂದುಕೊಳ್ಳದಿರು ನೀ
ಮೌಡ್ಯತೆಯ ಮಾರಿಯನು
ಮನೆಯೊಳಗೆ….
ಮನದೊಳಗೆ….!!

ಓಡುತ್ತಿದೆ ಅಜ್ಞಾನವು
ನಾಗಾಲೋಟದಿ…!
ಮೋಜು ಮಜಗಳ
ಪ್ರೇರಣೆಯಲಿ…!

ಈ ನೆಲ, ಈ ಜಲ
ಸೂರ್ಯ ಚಂದ್ರರು
ತತ್ತರಿಸಿ ಸುಟ್ಟು
ಕೆಂಡವಾದರೆ…??
ಉಳಿಯುವೆವೆ ನಾವೆಲ್ಲ.!!

ಬಿಟ್ಟಾಕು ನೀನಿನ್ನು
ಆ ವಾಸ್ತು ಈ ವಾಸ್ತು
ಸಹವಾಸ ಸಾಕಿನ್ನು
ಮೊದಲು ಅರಿತುಕೋ ನೀ
ವಾಸ್ತು ತೊರೆದು..,!
ವಾಸ್ತವವನ್ನು.!!

-ಅನ್ನಪೂರ್ಣ ಪದ್ಮಶಾಲಿ, ಕೊಪ್ಪಳ
*****