ಅನುದಿನ ಕವನ-೬೦೯, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು, ಕವನದ ಶೀರ್ಷಿಕೆ: ಕಾದಿರುವೆ ನಿನಗಾಗಿ

ಕಾದಿರುವೆ ನಿನಗಾಗಿ

ಇನಿಯನಿಲ್ಲದ ಮುಸ್ಸಂಜೆ ಬಣ್ಣ ಮಾಸಿದಂತಿದೆ
ಎದೆಯೊಳಗೆ ನೂರು ಭಾವ ಗಾಳಿ ಸೋಕಿದಂತಿದೆ
ದೇಹ ಮಾತ್ರ ಇಲ್ಲಿಹುದೆನೋ ಶ್ವಾಸ ನಿನ್ನ ಸೇರಿದೆ.
ಮೌನವಿಂದು ಮುಸುಕ್ಹೊದ್ದು ಬೆಂಕಿಯಾಗಿ ಸುಡುತಿದೆ.

ನೀನಿರದ ಏಕಾಂತ ನಗುವಿನೊಡನೆ ಮುನಿಸಿದೆ…
ಸನಿಹ ಬಾ ಸುಂದರಾಂಗ ಹೃದಯವಿಂದು ಕರೆದಿದೆ
ತಾಳ್ಮೆಯೆಂಬಾ ಕಟ್ಟೆಯಿಂದು ಮಡಿಕೆಯಂತೆ ಒಡೆದಿದೆ
ಹೊತ್ತು ಗೊತ್ತು ಅರಿವಿಲ್ಲಾ ಯುಗಗಳಂತೇ ಸಾಗಿದೆ

ಕಣ್ಣಂಚಿನ ಕಾಡಿಗೆ ಕೆನ್ನೆಗಳ ಸವರಿ ನಗುತಿದೆ
ತುಟಿಯ ರಂಗು ಅದರದುರಿ ಒಂದೆ ಸಮನೇ ಅಳುತಿದೆ
ಹೆರಳ ಅಪ್ಪಿ ಚೆಂದದೂವು ಮುದುಡಿ ಅಲ್ಲೇ ಮಲಗಿದೇ
ಕಾಲ್ಗೆಜ್ಜೆಯ ಜೋಡಿ ಇಂದು ಘಲ್ಘಲ್ ನಾದ ಮರೆತಿದೆ..

ಅಚ್ಚಳಿಯದ ಹಚ್ಚೆಯೊಂದು ನೆನಪಂತೆ ಉಳಿದಿದೆ
ಹುಚ್ಚು ಭಾವ ರಚ್ಛೆ ಹಿಡಿದು ನಿನ್ನನೆಕೆ ಬಯಸಿದೆ?
ಕರಗದ ಕನಸಂತೆ ಕಾಡಿ ಕತ್ತಲ್ಲೆಯಲ್ಲೆಕೇ ಕರಗಿದೆ..
ನಿನ್ನೊಲವ ಬಯಸಿ ಬಂದೆ ನಿನಗದು ಅರಿಯದೆ??


-ಪಾರ್ವತಿ ಸಪ್ನ, ಬೆಂಗಳೂರು
*****