ತನ್ನ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಕಂಡು ಸಂಭ್ರಮಿಸುವ ಸಾವಿರಾರು ಅಧ್ಯಾಪಕರು ನಮ್ಮೊಡನೆ ಇದ್ದಾರೆ. ದೇವದುರ್ಗ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಕೂಡಾ ತಮ್ಮ ವಿದ್ಯಾರ್ಥಿಗಳಿಗೆ ಸದಾ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಪ್ರೀತಿಯ ಶಿಷ್ಯನ ಕುರಿತು ಬರೆದಿದ್ದಾರೆ…..
🌺💐ಎಲ್ಲರಿಗೂ “ಶಿಕ್ಷಕರ ದಿನಾಚರಣೆಯ ಶುಭಾಶಯಗಳು🌺💐👇🍀
ನಾನು- “ಹಲೋ,”
ಅವನು- ಹಲೋ ಯಾರು?”
ನಾನು- “ನಾ ಯಾರು ಅಂತ ನಿನಗೆ ಗೊತ್ತಾಗುತ್ತೆ. ನೀ ಆರಾಮದೀಯಾ?”
ಅವನು – “ನೀವು ಯಾರು ಅಂತ ಮದ್ಲ ಹೇಳಿ?”
ನಾನು – “ಸಲ್ಪು ಹೈಸ್ಕೂಲ್ ಜೀವನ ನೆನೆಸಿಕೋಪಾ?”
ಅವನು- “ಓಂ ಮೈ ಗಾಡ್! ಸರ್ ನೀವು. ನೀವ್ಯಾಕೆ ಫೋನ್ ಹಚ್ಚಿದ್ರಿ ಸರ್, ನೀವು ಫೋನ್ ಹಚ್ಚಬಾರದಿತ್ತು! ಯಾರು ಕೊಟ್ಟರು ನನ್ನ ನಂಬರ್?”
ನಾನು – “ಯಾಕೋ ಹಿಂಗೆ ಮಾತಾಡ್ತಾ ಇದ್ದೀಯಾ? ಏನೋ ಬೇಜಾರಲ್ಲಿ ಇದ್ದಿಯ? ಏನು ಸಮಾಚಾರ. ಏನು ಸಮಸ್ಯೆ?”
ಅವನು -“ಏನೋ ಇಲ್ಲ ಸರ್. ಆದರೆ ನೀವ್ ಫೋನ್ ಹಚ್ಬಬಾರದಿತ್ತು. ನನಗೆ ತುಂಬಾ ಬೇಜಾರಾತು”
ನಾನು- “ಆಯ್ತು ಬಿಡಪ್ಪ ನಾನು ಫೋನ್ ಇಡ್ತಿನಿ.ಬೈ”
ಅವನು -“ಬೇಡ ಸರ್ ಬೇಡ. ಮಾತಾಡಿ.ಹೇಗಿದ್ದೀರಾ?”
ನಾನು -“ನಾನು ಆರಾಮಿದ್ದೀನಿ.ನೀನೇನ್ ಹೀಗ್ ಮಾತಾಡಿಬಿಟ್ಟಿ?”
ಅವನು – “ಏನಿಲ್ಲ ಸಾರ್. ನಾನು ಒಂದು ಕನಸು ಕಂಡಿದ್ದೆ. ದೊಡ್ಡ ಹುದ್ದೆಯನ್ನು ಪಡೆದು, ನೀವಿದ್ದಲ್ಲಿಗೆ ಹುಡುಕಿಕೊಂಡು ಬಂದು, ಒಂದು ದೊಡ್ಡ ‘ಸೆಲ್ಯೂಟ್’ ಹೊಡೆದು, ಆಶಿರ್ವಾದ ಪಡೆದು ಬರಬೇಕು. ಆಗ ನಿಮ್ಮ ಕಣ್ಣಲ್ಲಿ ಆಗುವ ಖುಷಿಯನ್ನು ನೋಡಬೇಕು. ಈ ಖುಷಿಗೆ,ಸಾಧನೆಗೆ ನೀವೇ ಕಾರಣ ಸರ್ ಅಂತ ಅನಬೇಕು ಅಂತ ಅನ್ಕೊಂಡಿದ್ದೆ ಸರ್. ಆದರ ನೀವು ಈಗಾ ಪೋನ್ ಹಚ್ಚಿಬಿಟ್ಟಿರಿ.”
ನಾನು -“ಇರಲಿ ಬಿಡು. ಈಗಲೂ ಏನಾಗೈತಿ? ಸಾಧಿನೆ ಮಾಡಾಕಿನ್ನೂ ಟೈಂ ಐತಿ. ಈಗೇನ್ ಮಾಡ್ತಾ ಇದ್ದೀಯಾ?”
ಅವನು – ಸರ್ ನಾನೀಗ ಇಂಥಾ ಹುದ್ದೆಯಲ್ಲಿದ್ದೇನೆ. ಆರಾಮಿದ್ದೀನಿ.ಆದರೆ ನೀವು ನನ್ನ ಮೇಲೆ ಯಾವ ಕನಸನ್ನು ಇಟ್ಟುಕೊಂಡು ನನ್ನನ್ನು ಬೆಳೆಸಿದ್ದಿರೋ ಆ ಹುದ್ದೆಯಲ್ಲಿ ಈ ನಿಮ್ಮ ಶಿಷ್ಯ ಇಲ್ಲ ಎಂದು ಹೇಗೆ ಹೇಳಲಿ.ಅದಕ್ಕೇ ಬೇಜಾರು ಸರ್.
ನಾನು-“ಅಯ್ಯೋ! ಬಿಡು. ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಚೆನ್ನಾಗಿ ಇದ್ದಿದ್ದರೆ ನೀನು ಇಷ್ಟೊತ್ತಿಗಾಗಲೇ ಆ ಹುದ್ದೆಯನ್ನೂ ಪಡೆಯುತ್ತಿದ್ದೆ. ಯಾವ ಕೆಲಸವಾದರೇನು ಖುಷಿಯಾಗಿರಬೇಕು ಅಷ್ಟೇ. ಮನೆಕಡೆ ಎಲ್ಲರನ್ನೂ ಚೆನ್ನಾಗಿ ನೋಡಿಕೋ. ಊರಿನ ನಂಟು ಕಳೆದುಕೊಳ್ಳಬೇಡ. ಸ್ನೇಹಿತರ ಸಂಪರ್ಕವನ್ನು ಕಳೆದುಕೊಳ್ಳಬೇಡ.
ಅವನು -“ಹೌದು ಸರ್.ನಮ್ಮ ಫ್ಯಾಮಿಲಿ ಹಿನ್ನೆಲೆ ನಿಮಗೆ ಗೊತ್ತೇ ಇದೆ ಆದರೂ ಒಂದಿನ ಗೆದ್ದೇಗೆಲ್ಲುತ್ತೇನೆ ಸರ್. ಅಷ್ಟು ಜಿಗುಟುತನವನ್ನು ನೀವು ಆಗಲೇ ಕಲಿಸಿಬಿಟ್ಟಿದ್ದೀರಿ.
ನಾನು-“ಊರಿಗೆ ಹೋಗಿರುತ್ತೀಯಾ?”
ಅವನು-“ಹೌದು ಸರ್. ಊರಿಗೆ ಹೋಗುತ್ತಿರುತ್ತೇನೆ.ಮೊನ್ನೆರ ಹೋಗಿ ಬಂದೆ. ಊರಲ್ಲಿ ಮನೆಯನ್ನು ಹಾಕಿಸಿದ್ದೇನೆ.ಮುಂದಿನ ತಿಂಗಳು ನನ್ನ ಎಂಗೇಜ್ಮೆಂಟ್ ಇದೆ.ದಯವಿಟ್ಟು ಬರಬೇಕು”.
ನಾನು-” ಆಯ್ತು.ಅಡ್ವಾನ್ಸ್ ತಿಳಿಸು.”
ಅವನು-“ಓಕೆ ಸಾರ್ ತಿಳಿಸುವೆ.”
ನಾನು-“ಚೆನ್ನಾಗಿರು. ಎಲ್ಲರೊಟ್ಟಿಗೆ ಇರು. ಖುಷಿಖುಷಿಯಾಗಿರು. ಯಾವುದಾದರೊಂದು ಆಟವನ್ನು ಆಡುತ್ತಿರು.ಅಂದಾಗ ಮಾತ್ರ ಲೈಪ್ ಚೆನ್ನಾಗಿರುತ್ತದೆ.”
ಅವನು-” ತುಂಬಾ ಧನ್ಯವಾದಗಳು ಸರ್.ನಿಮ್ಮ ಆಶಿರ್ವಾದ ಹೀಗೇ ಇರಲಿ”
ನಾನು -” ಅದು ಇದ್ದೇ ಇರುತ್ತದೆ.ನಿನ್ನ ಶ್ರಮವೇ ನಿನ್ನ ಗುರಿಯನ್ನು ತಲುಪಿಸುತ್ತದೆ. ಒಳ್ಳೆಯದಾಗಲಿ”
– ಯಲ್ಲಪ್ಪ ಹಂದ್ರಾಳ, ಮುಖ್ಯ ಗುರು,
ಸರಕಾರಿ ಪ್ರೌಢಶಾಲೆ, ದೇವದುರ್ಗ, ರಾಯಚೂರು ಜಿಲ್ಲಾ
*****
ಸರ್ ಅದು ನಿಮ್ಮ ಒಬ್ಬ ಪೊಲೀಸ್ ಶಿಷ್ಯನ ಕತೆಯಾಲ್ಲ ಎಷ್ಟು ನಿಮ್ಮ ಶಿಷ್ಯರ ಕತೆ ಹಾಗೆ ಇದೆ… ನಂದು ಅದೇ ಇದೆ ಕತೆ ಇದೆ….ನಿಮ್ಮ ಪಾಠಗಳನ್ನು, ನಿಮ್ಮ ವ್ಯೆಕ್ತಿತ್ವ ನೋಡಿ ಪ್ರೇರಣೆ ಆದವರು… ಮತ್ತು ನೀವು ಇಟ್ಟ ಭರವಸೆ, ನಂಬಿಕೆಯೇ ಇದಕ್ಕೆ ಕಾರಣ……ನೀವು ನಮ್ಮ ಮೇಲೆ ಇಟ್ಟ ಭರವಸೆ ತಲುಪಿಲ್ಲ ಅನ್ನೋ ಕೊರಕು ಇನ್ನು ಇದೆ, ನೀವು ನಮ್ಮ ಶಾಲಾ ದಿನಗಳಲ್ಲಿ ನಮಗೆ ದೊಡ್ಡ ಗುರಿಗಳನ್ನು ನಮ್ಮ ಮನಸಲ್ಲಿ ಬಿತ್ತಿಧಿರಿ ಆದರೇ ಅದನ್ನು ನಾವು ತಲುಪಿಲ್ಲ ಅನ್ನುವ ಕೊರಕು…. ನಾನು ವಾಟ್ಯಾಪ್ಪ್ ಅಲ್ಲಿ ಸ್ಟೇಟಸ್ ಹಾಕಿ ವಿಶ್ ಮಾಡೋಣ ಅನ್ನೋಕೊಂಡ್ ಆದ್ರೆ ಮನಸು ಯಾಕೋ ಒಪ್ಪಲಿಲ್ಲ ಏನೋ ಅಳುಕಿನ ಭಾವನೆ… ಅದಕ್ಕೆ ಮನಸಲ್ಲಿ ಹ್ಯಾಪಿ ಟೀಚರ್ ಅಂದುಕೊಂಡೆ…..ಅದೇನೇ ಇರಲಿ ನಿಮ್ಮನ್ನ ಶಿಕ್ಷಕರಾಗಿ ಪಡೆದ್ದುಕೊಂಡಿದು ನಾವೇ ಧನ್ಯರು…
Wish u happy teacher day sir….
ಇಂತಿ ನಿಮ್ಮ ಶಿಷ್ಯ
ಶಾಮರಾಯ್….
ಸರ್ ಅದು ನಿಮ್ಮ ಒಬ್ಬ ಪೊಲೀಸ್ ಶಿಷ್ಯನ
ಕತೆಯಾಲ್ಲ ಎಷ್ಟು ನಿಮ್ಮ ಶಿಷ್ಯರ ಕತೆ ಹಾಗೆ ಇದೆ… ನಂದು ಅದೇ ಇದೆ ಕತೆ ಇದೆ….ನಿಮ್ಮ ಪಾಠಗಳನ್ನು, ನಿಮ್ಮ ವ್ಯೆಕ್ತಿತ್ವ ನೋಡಿ ಪ್ರೇರಣೆ ಆದವರು… ಮತ್ತು ನೀವು ಇಟ್ಟ ಭರವಸೆ, ನಂಬಿಕೆಯೇ ಇದಕ್ಕೆ ಕಾರಣ……ನೀವು ನಮ್ಮ ಮೇಲೆ ಇಟ್ಟ ಭರವಸೆ ತಲುಪಿಲ್ಲ ಅನ್ನೋ ಕೊರಕು ಇನ್ನು ಇದೆ, ನೀವು ನಮ್ಮ ಶಾಲಾ ದಿನಗಳಲ್ಲಿ ನಮಗೆ ದೊಡ್ಡ ಗುರಿಗಳನ್ನು ನಮ್ಮ ಮನಸಲ್ಲಿ ಬಿತ್ತಿಧಿರಿ ಆದರೇ ಅದನ್ನು ನಾವು ತಲುಪಿಲ್ಲ ಅನ್ನುವ ಕೊರಕು…. ನಾನು ವಾಟ್ಯಾಪ್ಪ್ ಅಲ್ಲಿ ಸ್ಟೇಟಸ್ ಹಾಕಿ ವಿಶ್ ಮಾಡೋಣ ಅನ್ನೋಕೊಂಡೆ ಆದ್ರೆ ಮನಸ್ಸು ಯಾಕೋ ಒಪ್ಪಲಿಲ್ಲ ಏನೋ ಅಳುಕಿನ ಭಾವನೆ… ಅದಕ್ಕೆ ಮನಸಲ್ಲಿ ಹ್ಯಾಪಿ ಟೀಚರ್ ಅಂದುಕೊಂಡೆ…..ಅದೇನೇ ಇರಲಿ ನಿಮ್ಮನ್ನ ಶಿಕ್ಷಕರಾಗಿ ಪಡೆದ್ದುಕೊಂಡಿದು ನಾವೇ ಧನ್ಯರು…
Wish u happy teacher day sir….
ಇಂತಿ ನಿಮ್ಮ ಶಿಷ್ಯ
ಶಾಮರಾಯ್….