ಪ್ರೀತಿಸುವುದೆಂದರೆ
ಪ್ರೀತಿಸುವುದೆಂದರೆ
ಆ ಪ್ರೀತಿ ಹರಿಯುತ್ತಲೇ ಇರಬೇಕು
ಬತ್ತಲಾರದ ನದಿಯ ಹಾಗೇ
ಸುಪ್ತವಾಗಿ ಸೇರಬೇಕು
ಹೃದಯ ಸಾಗರಕೆ ,
ತುಂಬಾ ಆಳಕೆ
ದ್ವೇಷವೆಂದಿಗೂ ನುಸುಳಬಾರದು
ಪ್ರೀತಿಯ ಹರಿವಿಕೆಗೆ ಭೋರ್ಗರತಕೆ
ಪ್ರೀತಿಸುವುದೆಂದರೆ
ಆ ಪ್ರೀತಿ ಯಾವಾಗಲೂ
ಹೊನ್ನಿನಂತೆ ನಳನಳಿಸಬೇಕು
ಜಗವ ಪೊರೆವ ರವಿಯಂತೆ
ಬದುಕು ಬೆಳಗಿಸಿ ಹೊಳೆಸಬೇಕು
ಉಳಿಸಬೇಕು ಬೆಳೆಸಬೇಕು
ಪ್ರೀತಿಸುವುದೆಂದರೆ
ಆ ಪ್ರೀತಿ ಯಾವತ್ತೂ
ಮುಳ್ಳಾಗಿ ಚುಚ್ಚಿ ನೋಯಿಸದೆ
ಬಾಡಿದ ಹೂವಾಗದೆ
ಬೆಳದಿಂಗಳ ಬೆಳಕಾಗಬೇಕು
ಮತ್ತೆ ಮತ್ತೆ ತಂಪನೇ
ಎರಿಯಬೇಕು ಸುರಿಯಬೇಕು
ಮನದಂಗಳಕೆ
ಪ್ರೀತಿಸುವುದೆಂದರೆ
ಆ ಪ್ರೀತಿ ಹಾಗೇ ಉಳಿಯಬೇಕು
ಬದಲಾಗದೆ ಅನವರತ
-ಶಿವಾನಂದ ಉಳ್ಳಿಗೇರಿ, ಬೈಲಹೊಂಗಲ (ಬೆಳಗಾವಿ ಜಿ.)