ಶ್ರೀ ಹಾನಗಲ್ ಕುಮಾರ ಸ್ವಾಮೀಜಿ ಅರಿವು ಆಚಾರಗಳ ಮಹಾಸಂಗಮ -ಶ್ರೀ ಬಸವಲಿಂಗ ಮಹಾಸ್ವಾಮೀಜಿ

ಬಳ್ಳಾರಿ, ಸೆ.10: ರಾಜ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮಹತ್ತರ ಕಾರ್ಯಗಳಾಗಿದ್ದರೆ ಒಂದಲ್ಲಾ ಒಂದು ರೀತಿಯಲ್ಲಿ ಕುಮಾರ ಮಹಾಶಿವಯೋಗಿಗಳ ಪ್ರೇರಣೆ ಎಂದು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀ ಜಗದ್ಗುರ ಕೊಟ್ಟೂರು ಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ೧೫೫ನೇ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅರಿವು ಆಚಾರಗಳ ಮಹಾಸಂಗಮ ಮಹಾಸ್ವಾಮೀಜಿಯವರು. ಕನ್ನಡ ನಾಡಿನಲ್ಲಿರುವ ಬಹುತೇಕ ಮಠಗಳಿಗೆ ಶ್ರೀಗಳನ್ನು ನೀಡಿದ್ದಾರೆ. ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗಮಂದಿರ ಕೊಡುಗೆ ಸಮಾಜ ಸಂಘಟನೆಯಾಗಿ ಕಾಣುತ್ತಿವೆ ಎಂದು ತಿಳಿಸಿದರು.
ಸ್ವತಂತ್ರ ಪೂರ್ವದಲ್ಲಿಯೇ ರಾಷ್ಟ್ರ ಮಟ್ಟದ “ಅಖಿಲ ಭಾರತ ಮಹಾಸಭಾ”ವನ್ನು ಸ್ಥಾಪಿಸಲಾಗಿತ್ತು. ರಾಜ್ಯದ ಶೈಕ್ಷಣಿಕ ಕಾಂತ್ರಿಗೆ ಕೊಡುಗೆ ನೀಡಿದ ಕೆಎಲ್‌ಈ ಸಂಸ್ಥೆ, ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ, ಬಿಜಾಪುರದ ಬಿಎಲ್‌ಡಿ ಸಂಸ್ಥೆ ಇವೆಲ್ಲವುಗಳಿಗೆ ಪ್ರೇರಣಾದಾಯಕ ಕುಮಾರ ಶಿವಯೋಗಿಗಳು ಅವರ ಜೀವನ ಸಮಾಜ ಸಮಾಜಕ್ಕೊಂದು ಪಾವನ, ಕನ್ನಡಕ್ಕೊಂದು ಜೀವನ ಎಂದರು.
ಲಿಂ. ಸಂಗನ ಬಸವಸ್ವಾಮೀಜಿಗಳ ಗುರುಕಾಣಿಕೆಯಾಗಿ ೧.೫೦ ಕೋಟಿ ರೂ. ವೆಚ್ಚದ ಬೃಹತ್ ಸುಂದರ ರಥವನ್ನು ಶಿವಯೋಗ ಮಂದಿರ ಶತಮಾನತ್ಸೋವದ ಸಂದರ್ಭದಲ್ಲಿ ಅರ್ಪಿಸಿದ ಸಾರ್ಥಕತೆ ಸ್ಮರಣೀಯ ಎಂದು‌ ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ವೀ.ವಿ. ಸಂಘದ ಅಧ್ಯಕ್ಷ ಗುರುಸಿದ್ಧಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ದರೂರಿನ ಶ್ರೀ ಕೊಟ್ಟೂರು ಸ್ವಾಮೀಜಿ, ಕುರುಗೋಡಿನ ಶ್ರೀ ನಿರಂಜನ ಪ್ರಭುದೇವರು, ಸೋಮಸಮುದ್ರದ ಶ್ರೀ ಸಿದ್ಧಲಿಂಗದೇವರು, ಶ್ರೀಧರಗಡ್ಡೆಯ ಶ್ರೀ ಮರಿಕೊಟ್ಟೂರು ದೇವರು, ಬೂದಗುಂಪದ ಶ್ರೀ ಸಿದ್ದೇಶ್ವರದೇವರು, ವೀ.ವಿ. ಸಂಘದ ಕಾರ್ಯದರ್ಶಿ ಬಿ.ವಿ. ಬಸವರಾಜ್ ಮತ್ತಿತರಿದ್ದರು.
*****

One thought on “ಶ್ರೀ ಹಾನಗಲ್ ಕುಮಾರ ಸ್ವಾಮೀಜಿ ಅರಿವು ಆಚಾರಗಳ ಮಹಾಸಂಗಮ -ಶ್ರೀ ಬಸವಲಿಂಗ ಮಹಾಸ್ವಾಮೀಜಿ

Comments are closed.