ಗುರು ಕೃಪೆ ದೊರೆತವರು ಧನ್ಯ -ಬಸವರಾಜ ಅಮಾತಿ

ಬಳ್ಳಾರಿ, ಸೆ.12: ಗುರು ಕೃಪೆ ದೊರಕುವುದೇ ಪೂರ್ವ ಜನ್ಮದ ಪುಣ್ಯ ಎಂದು ಬಳ್ಳಾರಿ ಆಕಾಶವಾಣಿ ಕೇಂದ್ರದ ಅರೆಕಾಲಿಕ ಉದ್ಘೋಷಕ ಬಸವರಾಜ್ ಅಮಾತಿ ಅಭಿಪ್ರಾಯ ಪಟ್ಟರು.
ಇಲ್ಲಿನ‌ ವಿರಾಟ್ ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಭಾನುವಾರ ಆಯೋಜಿಸಿದ್ದ 21ನೇ ಮಾಸಿಕ ರಾಗರಂಗ ಕಾರ್ಯಕ್ರಮ ಮತ್ತು ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 12ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗುರು ಕೃಪೆ ದೊರೆತವರು ಧನ್ಯ ಎಂದು‌‌ ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲೆಯ ಹೆಸರಾಂತ ಹಾರ್ಮೋನಿಯಂ ವಾದಕ ಪೋಲಾಕ್ಸ್ ಹನುಮಂತಪ್ಪ ಅವರು ಉದ್ಘಾಟಿಸಿದರು.


ಸನ್ಮಾನ: ಇದೇ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಬಲವಾದಕ ಪಾಂಡುರಂಗಪ್ಪ ಮತ್ತು ವಿರಾಟ್ ನಗರದ ಗಣ್ಯರಾದ ರಾಘವ ರೆಡ್ಡಿ, ಶಿವಪ್ಪ ಮಾರುತಿ ಕ್ಯಾಂಪ್ ಮುಂತಾದವರು ಭಾಗವಹಿಸಿದ್ದರು.
ಸಂಗೀತ ಶಿಕ್ಷಕ ದಂಪತಿ ಶ್ರೀಮತಿ ಕವಿತಾ, ವಸಂತಕುಮಾರ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿಗೀತೆ, ಭಾವಗೀತೆ, ದಾಸರ ಪದಗಳನ್ನು ಪ್ರಸ್ತುತಪಡಿಸಿದರು.
ಹಾರ್ಮೋನಿಯಂ ಸಹಕಾರ ಕುಮಾರ್ ಪುಟ್ಟರಾಜ, ತಬಲಾಸಾಥಿಯನ್ನು ಯೋಗೀಶ್ ಸಂಗನಕಲ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರು ವಿರಾಟ್ ನಗರದ ನಿವಾಸಿಗಳು ಭಾಗವಹಿಸಿದ್ದರು.
ಪಾಕಶಾಲೆಯ ದೊಡ್ಡಬಸವ ಗವಾಯಿ ಸ್ವಾಗತಿಸಿದರು.
ಎರೇಗೌಡ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು. ಗೌರಿ ಸಹೋದರಿಯರು ಪ್ರಾರ್ಥಿಸಿದರು.