ಅನುದಿನ ಕವನ-೬೨೪, ಕವಯತ್ರಿ: ಡಾ.ವಾಣಿಶ್ರೀ, ಕಾಸರಗೋಡು, ಕವನದ ಶೀರ್ಷಿಕೆ: ಬವಣೆಗಳ‌ ಬದುಕು

ಬವಣೆಗಳ ಬದುಕು

ಮನುಜನ ಬದುಕಿನಲಿ ಬವಣೆಗಳು ನೂರಾರು
ಪರಿಹಾರದ ಸೂತ್ರಗಳ ಭಾವನೆಗಳು ಹಲವಾರು
ಬವಣೆಯ ಕಳೆಯಲು ಭಾವನೆಗಳ ಹೂಡುವರು
ಮನದಲಿ ತುಂಬಿರುವ ದುಗುಡವ ಮರೆಯುವರು

ಬರುವುದು ಕಷ್ಟಗಳು ಸಹಜ ಇಷ್ಟದಿಂದ ಸ್ವೀಕರಿಸಿ
ಎದೆಗುಂದದೆ ಮುನ್ನಡೆದು ಧೈರ್ಯದಿ ಎದುರಿಸಿ
ಮುಂದಿರುವುದು ಸುಖವೆಂದು ತಿಳಿದು ಪರಿಹರಿಸಿ
ಕಷ್ಟದಿಂದ ಸುಖದ ಮಹತ್ವ ತಿಳಿಯುವುದೆಂದು ಭಾವಿಸಿ

ಜನನದ ಮರಣದ ನಡುವೆಯೇ ಇಹುದು ಜೀವನ
ಅರಿಯುತಾ ಬೆರೆತರೆ ಜೀವನವೇ ಆಯಿತು ಪಾವನ
ಸಮರಸ ತುಂಬಿಕೊಂಡು ಬದುಕಿದರೆ ನಿತ್ಯಾನೂತನ
ಪರಮಾರ್ತ ದೊರಕಿದರೆ ಸಾರ್ಥಕ ಆಗುವುದು ಜನನ

-ಡಾ. ವಾಣಿಶ್ರೀ, ಕಾಸರಗೋಡು
ಗಡಿನಾಡ ಕನ್ನಡತಿ
*****