ಬಳ್ಳಾರಿ, ಸೆ.24: ನಗರದ ನಿಮಗಾಗಿ ನಾವು ಸಂಸ್ಥೆ ಮತ್ತು ಯೂನೈಟೆಡ್ ಟೀಮ್ ಸಂಸ್ಥೆಯ ಸಹಯೋಗದಲ್ಲಿ ಪದಾಧಿಕಾರಿಗಳು ಶನಿವಾರ ಸ್ಥಳೀಯ ಡಿ.ಎ.ಆರ್.ಪೊಲೀಸ್ ಲೈನ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಈರಮ್ಮ ಅವರು ಮಾತನಾಡಿ, ಎರಡು ಸಂಸ್ಥೆಗಳ ವಿದ್ಯಾರ್ಥಿಗಳ ನೆರವು ನೀಡುವ ಈ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು,
ಮಕ್ಕಳಿಗೆ ಕ್ರಿಡಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಯೂನೈಟೆಡ್ ಟೀಮ್ ನ ಸ್ನೇಹ ಓದಿನ ಜೊತೆಗೆ ಆಟಕ್ಕೂ ಆದ್ಯತೆ ನೀಡಬೇಕು ಈ ಮೂಲಕ ಮುಖ್ಯ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು,
ಸಂಸ್ಥೆಯ ಮುಖ್ಯಸ್ಥ ಶೈಲೇಶ್ ಮಾತಾಡಿ ಮುಂದಿನ ದಿನಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಎಂದು ಹಾರೈಸಿದರು.
ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಆನಂದ್ ಯೋಗಿ ಮಾತನಾಡಿ,
ಡಿಎಆರ್ ಲೈನ್ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸುವುದೇ ಸಂಸ್ಥೆಯ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಶ್ರಮ ನಿರಂತರವಾಗಿ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯೂನೈಟೆಡ್ ಟೀಮ್ ಸಂಸ್ಥೆಯ ಸರ್ವ ಸದಸ್ಯರು, ಶಾಲೆಯ ಶಿಕ್ಷಕಿಯರಾದ ಸುನೀತ, ಅರುಣ, ಶಿಲ್ಪ ಹಾಗೂ ನಿಮಗಾಗಿ ನಾವು ಸಂಸ್ಥೆಯ ಕಾರ್ಯನಿರ್ವಾಹಕರಾದ ಹೇಮಂತ್ ಸುದರ್ಶನ್, ವಿನಯ್, ಭಾಷಾ ಮತ್ತಿತರರು ಪಾಲ್ಗೊಂಡಿದ್ದರು.
*****