ಇದು ಅನುರಾಗದ ಭಾವದಾಂಗುಡಿಗಳ ಮಿನಿಗವಿತೆ. ಒಲವಿನ ಹುಚ್ಚು, ಕಿಚ್ಚುಗಳ ಇನಿಗವಿತೆ. ಪ್ರಾಯದ ಭಗ್ನಪ್ರೇಮಿಗಳಿಗೆ ಪ್ರಿಯಾವಾಗಬಲ್ಲುದು. ಇಳಿವಯಸ್ಸಿನ ಸ್ಮಿತಪ್ರಙ್ನರಿಗೆ ನೆನಪುಗಳ ಮರುಕಳಿಸಬಲ್ಲುದು. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
“ಕಿಚ್ಚು..!”
ಅಂದು ಬೆರೆವ ಹುಚ್ಚು!
ಇಂದು ಮರೆವ ಹುಚ್ಚು!
ಆಗ ಬೆರೆಯಲಿಕ್ಕಂತೂ..
ಆಗಲೇ.. ಇಲ್ಲ..!!
ಈಗ ಮರೆಯಲಿಕ್ಕೂ..
ಆಗುತ್ತಲೇ.. ಇಲ್ಲ..!!!
ಬೆರೆವ-ಮರೆವ ಹುಚ್ಚುಗಳು
ಹಚ್ಚಿದ್ದು.. ಮಾತ್ರಾ..
ಎದೆಯೊಳಗೆ ಎಂದಿಗೂ..
ಆರದ ಕಾಳ್ಗಿಚ್ಚು..!!!
-ಎ.ಎನ್.ರಮೇಶ್. ಗುಬ್ಬಿ.
*****