ಬಳ್ಳಾರಿ, ಸೆ.28: ಪೂರ್ವವಲಯದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಅವರು ಬುಧವಾರ ತಾಲೂಕಿನ ಹಲವು ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಸಿಓಗಳಾದ ಗೂಳಪ್ಪ ಬೆಳ್ಳಿಕಟ್ಟೆ, ಹಿರೇಮಠ್ ಅವರೊಂದಿಗೆ ಮಿಂಚಿನ ಸಂಚಾರ ನಡೆಸಿದ ಕೆಂಪಯ್ಯ ಅವರು ತಾಲೂಕಿನ ಹಲಕುಂದಿಯ ಸರ್ಕಾರಿ ಪ್ರೌಢಶಾಲೆ, ಗಾಂಧೀಜಿ ಪ್ರೌಢಶಾಲೆ, , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ.ಕಿ.ಪ್ರಾ.ಶಾಲೆ (ವಿ.ಬಿ.ಎಸ್.ಮಠ) ಮತ್ತು ಮುಂಡರಗಿ ಭಗವಾನ್ ಬುದ್ಧ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾಮಟ್ಟವನ್ನು ಪರೀಕ್ಷಿಸಿದರು.
ಶಾಲೆಯ ಮುಖ್ಯಗುರುಗಳೊಂದಿಗೆ ಚರ್ಚಿಸಿದ ಕೆಂಪಯ್ಯ ಅವರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು, ಶಾಲಾವರಣ ಸ್ವಚ್ಛತೆ ಕಾಪಾಡುವುದು,
ಶಾಲೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶಿಸ್ತಿನಿಂದ ಗುಣಮಟ್ಟದ ಕಲಿಕೆಯನ್ನು ಕಲಿಕಾ ಚೇತರಿಕೆ ಉಪಕ್ರಮವನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ತಿಳಿಸಿದರು.
ಉಚಿತ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ಪ್ರೋತ್ಸಾಹಿಸಬೇಕು. ಪ್ರತಿದಿನ ಹಾಜರಾತಿಯನ್ನು ಸ್ಯಾಟ್ಸ್ ನಲ್ಲಿ ನವೀಕರಿಸಬೇಕು ಎಂದು ಸೂಚಿಸಿದರು.
ಶಾಲೆಯಿಂದ ಹೊರಗುಳಿದ ಸ್ಥಳಿಯ ಬಾಪೂಜಿನಗರದ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ತನುಷಾಳನ್ನು ಪಾಲಕ ಪೋಷಕರ ಮನವೊಲಿಸಿ ಶಾಲೆಗೆ ಕರೆತರಲಾಯಿತು.
ಹಲಕುಂದಿ ಸಕಿಪ್ರಾ ಶಾಲೆಗೆ ಭೇಟಿನೀಡಿದ ಸಂದರ್ಭದಲ್ಲಿ
ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್, ಕಾಲೋನಿ ಮುಖಂಡ ಅಂಜಿಣಪ್ಪ, ಪ್ರಭಾರಿ ಮುಖ್ಯಗುರುಗಳಾದ ಮೀನಾಕ್ಷಿ ಕಾಳೆ, ಅತಿಥಿ ಶಿಕ್ಷಕಿಯರಾದ ಮಂಜುಳಾ, ಹೊನ್ನೂರಮ್ಮ, ಅಡುಗೆ ಸಹಾಯಕಿ ಹೇಮಾವತಿ, ಅಂಗನವಾಡಿ ಶಿಕ್ಷಕಿ ಅಂಬಮ್ಮ, ಪಾಲಕರು ಇದ್ದರು.
*****