ಬೆಂಗಳೂರು, ಸೆ.30: ಹಿರಿಯ ಸಾಹಿತಿ ನಾಡೋಜ ಡಾ. ಹಂ. ಪ. ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಜಿ. ನಾರಾಯಣರವರ ಜನ್ಮಶತಮಾನೋತ್ಸವ ಆಚರಿಸುವ ಬಗ್ಗೆ ಗುರುವಾರ ನಗರದಲ್ಲಿ ಸಭೆ ನಡೆಯಿತು.
ಡಾ. ಜಿ. ನಾರಾಯಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ನ.30 ರಂದು ಜನ್ಮಶತಮಾನೋತ್ಸವದ ವರ್ಷಾಚರಣೆಯ ಉದ್ಘಾಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಅವರು ತಿಳಿಸಿದರು.
ಮಾಜಿ ಉಪಮಾಹಪೌರ ರಾಮೇಗೌಡ, ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ಎಂ. ನರಸಿಂಹ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಆರ್. ಸತ್ಯನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್, ಕನ್ನಡ ಶ್ರೀ ಸಾಮಾನ್ಯ ಕೂಟದ ಅಧ್ಯಕ್ಷ ಶ್ರ. ದೇ. ಪಾರ್ಶ್ವನಾಥ್ ಕರ್ನಾಟಕ ಜಾನಪದ ಪರಿಷತ್ತಿನ ನಿವೃತ್ತ ಅಧಿಕಾರಿ ಕುರುವ ಬಸವರಾಜು, ನಾಡೋಜ ಡಾ. ಜಿ. ನಾರಾಯಣ ಪ್ರತಿಷ್ಠಾನದ ಅಧ್ಯಕ್ಷರಾದ ಜಿ. ನಾ. ಗೋಪಾಲಕೃಷ್ಣ, ಕನ್ನಡ ಜನಶಕ್ತಿ ಕೇಂದ್ರದ ಸಂಚಾಲಕ ಸಿ. ಕೆ. ದಾಸಪ್ಪ, ನಾಡಪ್ರಭು ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉಮಾ ಬಸವರಾಜು, ಜಿ. ನಾರಾಯಣ ಪ್ರತಿಷ್ಠಾನದ ಲಕ್ಷ್ಮೀ, ಪುಷ್ಪ, ಶುಭ ಹಾಗೂ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
*****