ಬಳ್ಳಾರಿ ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು -ಜಿಲ್ಲಾ ಗವರ್ನರ್ ವೊಮ್ಮಿನಿ ಸತೀಶ್‌

ಬಳ್ಳಾರಿ, ಅ.1: ಜಗತ್ತಿನಲ್ಲಿ ವೃತ್ತಿಗಳಲ್ಲಿಯೇ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು
ರೋಟರಿ ಕ್ಲಬ್ ಜಿಲ್ಲಾ ಗವರ್ನೆರ್ ವೊಮ್ಮಿನಿ ಸತೀಶ್‌ ಅವರು ಹೇಳಿದರು.
ನಗರದ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಸ್ಥಳೀಯ ರಾಯಲ್ ಫೋರ್ಟ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ‌ ಶಿಕ್ಷಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಎಂತಹ ದೊಡ್ಡ ಹುದ್ದೆಯಲ್ಲಿದ್ದರು ತಮ್ಮ ಅಧ್ಯಾಪಕರಿಗೆ ಗಣ್ಯರು ಗೌರವ‌ನೀಡುತ್ತಾರೆ. ಗುರು ಏನನ್ನೂ ನಿರೀಕ್ಷಿಸುವುದಿಲ್ಲ. ನಿಸ್ವಾರ್ಥತೆಯಿಂದ ತಮ್ಮ ವಿದ್ಯಾರ್ಥಿಗಳ ಏಳ್ಗೆಯಲ್ಲಿ ಸಂತಸ ಕಾಣುತ್ತಾರೆ ಎಂದು ತಿಳಿಸಿದರು.
ಸೂರ್ಯ ಉದಯಿಸುವ ಪ್ರಪಂಚದ ಎಲ್ಲಾ ದೇಶಗಳಲ್ಲಿ ರೋಟರಿ ಸಂಸ್ಥೆ ಸಲ್ಲಿಸುವ ಸೇವೆ ಅನನ್ಯ. ಬೇರೆಯವರ ಕಷ್ಟಗಳನ್ನು ರೋಟರಿಯನ್ಸ್ ಅರಿತು ಸ್ಪಂದಿಸುತ್ತಾರೆ ಎಂದ ಸತೀಶ್ ಅವರು ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿ ಕ್ಲಬ್ ಪಾತ್ರ ಮಹತ್ವದ್ದಾಗಿದೆ ಎಂದರು.

ಉತ್ತಮ ಶಿಕ್ಷಕರಿಗೆ ಸನ್ಮಾನ: ನಿವೃತ್ತರಾದ ಬಳಿಕವೂ ಕಳೆದ ಎಂಟು ವರ್ಷಗಳಿಂದ ಉಚಿತ ಪಾಠ ಮಾಡುವ ಟಿ. ಸುಜಾತ, ವಿದ್ಯಾರ್ಥಿಗಳ ಮೆಚ್ಚಿನ ವಿವಿಧ ಶಾಲೆಗಳ ಅಧ್ಯಾಪಕರುಗಳಾದ ಶೀಲಾ, ಬಿ. ಎಂ ನಾಗರಾಜಯ್ಯ, ಚಂದ್ರಿಕಾ, ಸಿ.ಎಚ್. ವತ್ಸಲ, ಮಲ್ಲಿಕಾ ಬೇಗಂ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಲ್.ಸಾಯಿ ಪ್ರಸಾದ್ ರೆಡ್ಡಿ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಆರ್.ಸುರೇಶ್
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಿಂಧುಕಿರಣ್. ಕೆ
ಕಾರ್ಯದರ್ಶಿ ಎನ್.ಟಿ.ಲಕ್ಷ್ಮಿ ಪ್ರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಚಂದ್ರಶೇಖರ್, ಇನ್ನರ್ ವೀಲ್ ಕ್ಲಬ್ ಸದಸ್ಯೆ ರೂಪ ದೀಪಕ್ ಹಾಗೂ ಹಿರಿಯ ಸದಸ್ಯ
ಕ್ಸೆವಿಯರ್ ನಿರ್ವಹಿಸಿದರು.


ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಬಿ.ಎಲ್.ಆನಂದ ರಾವ್, ರವೀಂದ್ರ ನಾಯ್ಡು, ನಾಮ ಸತ್ಯನಾರಾಯಣ , ವಿಟ್ಟ ಕೃಷ್ಣ , ಶಿವ ಕುಮಾರ ಕೆ.ಯಂ, ಚಂದ್ರಶೇಖರ್ .ಯು, ವಿನೋದ್ ಜೈನ್ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳಾದ ಗೀತಾ ನಾಯ್ಡು, ಅಶ್ವಿನಿ ಶ್ರೀನಿವಾಸ್, ಸುಧಾ ನಾಮ ಸತ್ಯನಾರಾಯಣ, ರೂಪ ದೀಪಕ್, ಅನಿತಾ ಜೈನ್ ಮತ್ತು ಹೇಮಾ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*****