ಐದು ಹನಿಗವನಗಳು
೧. ಆಚರಣೆ👇
ಒಬ್ಬರಿಗೊಬ್ಬರು ಸೌಹಾರ್ದತೆ ಬೆಳೆಯಲು
ಹಿರಿಯರು ಮಾಡಿದ
ಆಚರಣೆ ಅರ್ಥಪೂರ್ಣ ;
ವಿಜಯದಶಮಿಯಲ್ಲಿ ಬನ್ನಿ ವಿನಿಮಯ
ಮಾಡುವುದೇ ಗೊತ್ತಿಲ್ಲ
ಈಗಿನ ಪೀಳಿಗೆಗೆ ಎಲ್ಲವೂ ಗೌಣ.
೨. ಸ್ಥಿತಿ👇
ಹಿಂದಿನ ಕಾಲದ ಹೆಂಗಳೆಯರಿಗೆ
ಹಬ್ಬಗಳೆಂದರೆ
ವಿಶೇಷ ಶ್ರದ್ಧೆ ಭಕ್ತಿ ;
ಈಗಿನವರಿಗೋ ಯಾವುದೂ ಗೊತ್ತಿಲ್ಲ
ಬರೀ ಕ್ಲಬ್ ಪಬ್
ಮೋಜು ಮಸ್ತಿ.
೩.ಹಬ್ಬ👇
ಹಿಂದಿನ ಕಾಲದಲ್ಲಿ ಹಬ್ಬ ಬಂದರೆ
ಮನೆ ಮನ ತುಂಬಾ
ಸಂತೃಪ್ತಿಯ ಸೊಬಗು ;
ಪ್ರಸ್ತುತ ದಿನಗಳಲ್ಲಿ
ದುಡಿಮೆಗೆ ಒತ್ತು ಕೊಟ್ಟು ಕೊಟ್ಟು
ತಿಳಿದೇಯಿಲ್ಲ ಹಬ್ಬದ ಮೆರಗು.
೪. ಕಾಲ👇
ದಸರಾ ಹಬ್ಬದ ದಿನದಂದು
” ಬನ್ನಿ ಕೊಟ್ಟು ಬಂಗಾರದ್ಹಂಗ ಬಾಳೋಣ ”
ಹಿಂದಿನವರಲ್ಲಿ ಇತ್ತು ಒಗ್ಗಟ್ಟಿನ ಸಹಬಾಳ್ವೆ ;
ಇವತ್ತಿನ ಕೆಲ ಜನರಿಗೆ ಹಬ್ಬಗಳೇ ತಿಳಿದಿಲ್ಲ
ಎಲ್ಲದಕ್ಕೂ ಸಮಯದ ಅಭಾವ
ಎಲ್ಲಿದೆ ವೇಳೆ !?.
೫.ವ್ಯಾಪಾರ👇
ನವರಾತ್ರಿ ಹಬ್ಬಕ್ಕೆ
ಒಂಭತ್ತು ದಿನವೂ ದೇವಿಗೆ
ವಿಧ – ವಿಧ ಅಲಂಕಾರ ;
ಈ ಹೆಂಗಳೆಯರೋ ಒಂಭತ್ತು ದಿನವೂ
ವಿವಿಧ ಸೀರೆಯಲ್ಲಿ ಮಿಂಚಿದ್ದೇ ಮಿಂಚಿದ್ದು
ಅಂಗಡಿಯವನಿಗೆ ಜೋರು ವ್ಯಾಪಾರ
-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ
*****