ಅನುದಿನ‌ ಕವನ-೬೪೮, ಕವಿ: ಟಿ.ಪಿ.‌ಉಮೇಶ, ಅಮೃತಾಪುರ ಹೊಳಲ್ಕೆರೆ ತಾ. ಕವನದ ಶೀರ್ಷಿಕೆ:ಕವಿ…ನಾ!?

ಕವಿ….ನಾ!?

ನೀ….
ಬರೆಯುತ್ತಿರುವ ಕಾವ್ಯ
ನಾ..!
ನಿನ್ನ ಬರೆಯಲು ತಡವರಿಸುತ್ತಿರುವ
ಕವಿ…ನಾ..!?
*
ಬರೆಯಲು ಆರಂಭಿಸಬಹುದು
ಮುಗಿಯುವುದು ಮಾತ್ರ
ನಿನ್ನಿಂದಲೇ
ಈ ಬದುಕೆಂಬ ಕಾವ್ಯ!
*
ಆರಂಭಿಸಿದ್ದೀಯ
ಬದುಕಿನ ಕಾವ್ಯ
ಈ ಜನ್ಮಕೆ ಮುಗಿಯದಿದ್ದರು
ತಾಳ್ಮೆಯಲಿ ಕಾಯುವೆ
ಜನ್ಮ ಜನ್ಮಗಳಿಗು
*
ನಿಲ್ಲಿಸಿದರು
ಒಲವ ಬರಹ
ನಿಲ್ಲಿಸದಿರು
ನಗೆಯ ಬದುಕ


-ಟಿ.ಪಿ.‌ಉಮೇಶ, ಅಮೃತಾಪುರ, ಹೊಳಲ್ಕೆರೆ ತಾ.
*****