ಪ್ರಶಸ್ತಿ
ಪ್ರಶಸ್ತಿ ಬೇಕಾ ಪ್ರಶಸ್ತಿ !?
ಬೇಕೆಂದು ಬಯಸಿದರೆ
ಯಾರಿಗೂ ಸಿಗುವಂತಹ
ಪ್ರಶಸ್ತಿ
ಪದವಿ ಬೇಕಿಲ್ಲ
ಪಿ. ಹೆಚ್. ಡಿ ಹಂಗಿಲ್ಲ !
ಮಾರಾಟಕ್ಕಿದೆ ಡಾಕ್ಟರೇಟ್
ಕೊಟ್ಟು ಪಡೆಯಬಹುದಂತೆ
ಇಂತಿಷ್ಟು ರೇಟ್ !
ಎಲ್ಲಾ ಕ್ಷೇತ್ರದಲ್ಲೂ
ಇರುವರು ಸಾಧಕರು
ಅವರನ್ನು ಗುರುತಿಸುವವರು ಯಾರು ??
ಸಾಧಕರನ್ನು ಹುಡುಕುವುದು
ವಿರಳ
ಹಣ ಕೊಟ್ಟವರಿಗೇ
ಹಾರ – ತುರಾಯಿ ಬಹಳ !
ಸಾಧನೆ ಇಲ್ಲದೆ ಸಿಗುವುದಾದರೆ
ಸಾಧಿಸುವ ಛಲವಾದರೂ ಯಾಕೆ ?
ಎಲ್ಲರ ಮನಸ್ಥಿತಿ
ಮಾರಾಟವಾಗುವ ಮುನ್ನ
ಎಚ್ಚೆತ್ತುಕೊಳ್ಳಬೇಕಿದೆ ಈ ಸಮಾಜ
ತನ್ನ ತನವನ್ನು
ಉಳಿಸಿಕೊಳ್ಳಬೇಕಿದೆ ನಿಜ!
ಕಾಸು ಕೊಟ್ಟು
ಪ್ರಶಸ್ತಿಯ ಹಿಂದೆ
ಹೋಗುವುದಕ್ಕಿಂತ
ಪ್ರಶಸ್ತಿಯೇ ಹುಡುಕಿಕೊಂಡು ಬರಲಿ
ಸಮಾಜಕ್ಕೆ ನಮ್ಮಗಳ
ಕೊಡುಗೆ ಇರಲಿ !
ಸಾಧಿಸುವ ಛಲಗಾರ
ಪ್ರಶಸ್ತಿಯ ಗೋಜಿಗೆ
ಹೋಗಲಾರ
ಪರಿಶ್ರಮದಿಂದ
ಸಾಧಿಸುವವನೇ ಧೀರ
ಅವನೇ ನಿಜವಾದ ಸಾಧಕ
ನಿರಂತರ
ಶ್ರಮದ ಬದುಕು
ಸಾರ್ಥಕ.
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****