ಅನುದಿನ ಕವನ-೬೮೫, ಕವಯತ್ರಿ: ಶೀಲಾ ಅರಕಲಗೂಡು, ಕವನದ ಶೀರ್ಷಿಕೆ:ಬಣ್ಣ ಬಯಲು

ಬಣ್ಣ ಬಯಲು

ತುಂಬ ಬೇಕು ಬಹಳಷ್ಟನ್ನು
ನೋಡಿದೆಡೆಯಲ್ಲೆಲ್ಲಾ ಖಾಲಿ ಖಾಲಿ
ಅಲ್ಲಿ ನಿಂತೆ ಇಲ್ಲಿ ಕುಳಿತೆ
ಮಾಡಿದ್ದು ಬರೀ ಚಿಂತೆ

ಕೃಷಿಯ ಮಾಡದಿರೆ
ಹಸಿರು ಬೆಳೆಯುವುದೆಂತು?
ಭಿತ್ತಿಯೇ ಇಲ್ಲದಿರೆ
ಚಿತ್ರ ಮೂಡುವುದೆಂತು?

ಬೀಜ ಸಾಕಷ್ಟಿಹುದು
ಬಿತ್ತಬಾರದೇನು?
ಬಣ್ಣಗಳ ರಾಶಿಯಿದೆ
ಬಳಸಬೇಕವನು

ಕಲ್ಲುಗಳ ರಾಶಿಯಿದೆ
ಮೂರ್ತಿಗಳವುಗಳಲಿ
ಕೆತ್ತಿದರೆ ಬಯಲಾಗಿ
ಬಣ್ಣವಾಗುವುವು

ಸೃಷ್ಪಿಕರ್ತನ ನೋಡೆ
ಬಯಲೆಲ್ಲ ಬಣ್ಣ
ನನ್ನೊಳಗನು ನೋಡೆ
ಬಣ್ಣ ಬಯಲು


-ಶೀಲಾ ಅರಕಲಗೂಡು
*****