ಅನುದಿನ ಕವನ-೬೮೯, ಕವಿ: ಪ್ರಕಾಶ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಾಲ್ಕು ಹನಿಗಳು

 

ನಾಲ್ಕು ಹನಿಗಳು


ಪ್ರಕೃತಿ ಅನ್ನೋದು
ದೇವರ ಮನಿ ಇದ್ದಂಗ
ತೀರ್ಥ ಪ್ರಸಾದ ಎಲ್ಲಾ ಸಿಕ್ತಾವು
ಅದರೊಳಗs
ಎಲ್ರೂ ಹಂಚ್ಕೋಬೇಕು ಅದನ್ನ
ಅದ ಬಿಟ್ಟು ನೀss ವಿಕೃತಿ ಮಾಡಾಕ ಹೊರಟ್ರ
ದೇವ್ರು ಪಾಠ ಕಲಸ್ತಾನ
ನೀssಮರೀದ್ಹಾಂಗ!


ಗುಡಿಯಾಗ ಕುಂತಾವ ಮಾತ್ರ
ಗುರು ಅಲ್ಲಾ
ಮಾತಿಗೆ ಮೊದ್ಲ ಯೋಚ್ನೆ ಮಾಡೋರು
ಖರೆ ಖರೆ ಗುರು ಸದ್ಗುರು


ಶಿವಾನುಭವ ದಾಗ
ತಿಳ್ಕೋಬೇಕು
ತೊಳ್ಕೋಬೇಕು
ಕಳಕೋಬೇಕು
ಪಡಕೋಬೇಕು
ಇಂತವನ್ನ ಅಂತಾರ ಜಾಣ ಹಿಂಗಂತಾರ ನಮ್ಮ ಶರಣ


ಧರ್ಮ ವಂತರಿಗೆ ಪರಬ್ರಹ್ಮ ಕೂಡ ನಡುಗ್ತಾನ;
ಹರಿ ಹರ ಸುರರು ಕೂಡ ಅಂಜ್ತಾರ,
ಅಲ್ಪ ಸುಖಕ್ಕ ಹಲ್ಲು ಗಿಂಜೋರ್ನ ಕಂಡ್ರ
ನಮ್ಮ ಶರಣರು ಅದ್ಹೆಂಗ ಸುಮ್ನಿರ್ತಾರ!

-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****