ಅನುದಿನ ಕವನ-೬೯೨, ಯುವ ಕವಿ: ಲೈನ್ಮನ್ ರಾಮಣ್ಣ, ಹರಾಳು, ಕೊಟ್ಟೂರು ತಾಲೂಕು, ಕವನದ ಶೀರ್ಷಿಕೆ: ಲೈನ್ಮನ್ ಹನಿಗಳು!

ಲೈನ್ಮನ್ ‘ಹನಿಗಳು’

ನಾನು ಕಣ್ಣೀರಲ್ಲಿ ಬರೆದ ಕವಿತೆಗಳ
ನಿನ್ನ ಹೆಸರಿನಲಿ ಪ್ರಕಟಿಸಲು
ಮೊದಲು ಅನುಮತಿ ಕೊಡು.

ಇಡೀ ಪುಸ್ತಕ ದುಃಖಭರಿತವಾಗಿದೆ;
ನೀನೊಂದು ಇದಕ್ಕೆ ಭರವಸೆಯ
ಮುನ್ನುಡಿ ಬರೆದು ಕೊಡು.

ನಾನು ಬಡ ಕವಿ ಮಾರಾಯಿತಿ,
ನಿನ್ನ ಮದುವೆ ಮಂಟಪದಲ್ಲೇ
ಕೃತಿ ಲೋಕಾರ್ಪಣೆಗೊಳಿಸಿ
ಉಪಕಾರ ಮಾಡು.

ಕೀರ್ತಿ, ಪದವಿ, ಪುರಸ್ಕಾರಗಳ‌ನು
ಬೆನ್ನಿಗೆ ಕಟ್ಟಿಕೊಂಡ ಮಲಗಿದ
ಈ ನಿರ್ಗತಿಕನಿಗೆ
ನೀ‌ನೊಂದು ಹಿಡಿ ಮಣ್ಣು ಕೊಡು.


-ಲೈನ್ಮನ್ ರಾಮಣ್ಣ, ಹರಾಳು, ಕೊಟ್ಟೂರು ತಾ.
*****