ಗಝಲ್
ಮಲ್ಲಿಗೆ ಮುಡಿಸಿ ಮುನಿಸ ಸರಿಸಿ ಒಲವ ಮೂಡಿಸಿದೆಯಾ ನೀನು
ಸೊಲ್ಲಿಗೆ ಒಲಿಯಲು ಮನದ ಇಂಗಿತ ತಿಳಿದು
ಹರ್ಷಿಸಿದೆಯಾ ನೀನು
ಕನ್ನಡಿಯ ಬಿಂಬಕೆ ಮುಸುಕು ಎಳೆದು ನಯನದಿ ಪ್ರತಿ ಬಿಂಬವಾದೆ
ಚೆನ್ನುಡಿಯ ಮೋಡಿಗೆ ಶಿರಬಾಗಿ ಭಯದ ಪರದೆ ಸರಿಸಿದೆಯಾ ನೀನು
ಕನಸಿನ ಲೋಕಕೆ ಕೊಂಡೊಯ್ದು ಬಾಳ ಪಯಣ ನನಸು ಮಾಡಿದೆ
ಒಳಿತಿನ ಚಿಂತನ ಮಾಲೆಯ ಧರಿಸಿ ಸಂತೃಪ್ತಿ ತರಿಸಿದೆಯಾ ನೀನು
ತಾಮಸ ಚಿತ್ತವು ಮೌನವ ತಳೆಯಲು ಭವದಲಿ ವೇಳೆ ಮೌಲ್ಯವಲ್ಲವೇ
ಸಂತಸ ತರುವ ನೂತನ
ಚೇತನ ಹಣತೆ ಹಚ್ಚಿಸಿದೆಯಾ ನೀನು
ಕುಸುಮ ಅರಳುವ ಮುನ್ನವೇ ಮೊಗ್ಗು *ಸುಗಂಧ* ಎಲ್ಲೆಡೆ ಬೀರುತಿದೆ
ಎಡರು ತೊಡರಲಿ ಒಟ್ಟಿಗೆ ಸಾಗುವ ಭರವಸೆ ಹೆಚ್ಚಿಸಿದೆಯಾ ನೀನು
-✍️ಡಾ. ಸೌಗಂಧಿಕಾ ವಿ ಜೋಯಿಸ್, ನಂಜನಗೂಡು
*****