ಅನುದಿನ‌ ಕವನ-೬೯೮ (2ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್) ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕರ್ನಾಟಕ ಕಹಳೆ, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಹೆಮ್ಮೆಯ ಕನ್ನಡಿಗರ ಕೊರಳ ದನಿಯಾಗಿರುವ ಕರ್ನಾಟಕ ಕಹಳೆ ಡಾಟ್ ಕಾಮ್ ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಎರಡು ವರ್ಷಗಳ ಹಿಂದೆ ಇದೇ ದಿನ ನ. 29ರಂದು ಬಳ್ಳಾರಿ ವಲಯದ ಐಜಿಪಿ(ಪ್ರಸ್ತುತ ಎಡಿಜಿಪಿ), ಸಾಹಿತಿ, ಸಂಶೋಧಕರಾದ ಶ್ರೀ ಎಂ. ನಂಜುಂಡಸ್ವಾಮಿ (ಮನಂ) ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಚಾಲನೆ‌ ನೀಡಿ ಹರಸಿದ್ದರು.


ಕರ್ನಾಟಕ ಕಹಳೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಸುದ್ದಿಗಳ ಜತೆಗೆ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಆದ್ಯತೆ ನೀಡಿದೆ. 01-01-2021ರಿಂದ ಆರಂಭವಾಗಿರುವ ಅನುದಿನ ಕವನ ಕಾಲಂ ಜನಪ್ರಿಯವಾಗಿದೆ. ವಿದೇಶಗಳಲ್ಲಿ ವಾಸಿಸುತ್ತಿರುವ ಕನ್ನಡ ಬಂಧುಗಳು ತಮ್ಮ ಕವಿತೆ, ಬರಹಗಳನ್ನು ಕಳುಹಿಸಿ ಉತ್ತೇಜಿಸಿದ್ದಾರೆ.
ಬರುವ ಹೊಸ ವರ್ಷದಿಂದ‌ ಜಾಲತಾಣ ಮತ್ತಷ್ಟು ಆಕರ್ಷಕವಾಗಿ ವಿಭಿನ್ನವಾಗಿ ಓದುಗರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಜನವರಿ ತಿಂಗಳಲ್ಲಿ 2 ನೇ ವಾರ್ಷಿಕೋತ್ಸವವನ್ನು ಬಳ್ಳಾರಿ ಅಥವಾ ಹೊಸಪೇಟೆಯಲ್ಲಿ ಆಚರಿಸಲು ಯೋಜಿಸಲಾಗಿದೆ. ಎಂದಿನಂತೆ ನಿಮ್ಮೆಲ್ಲರ ಸಹಕಾರ, ಬೆಂಬಲ, ಪ್ರೋತ್ಸಾಹ karnatakakahale.com ಮೇಲಿರಲಿ.


*****
ಹೂವಿನ ಹಡಗಲಿಯ ಕವಯಿತ್ರಿ ಶೋಭ‌ ಮಲ್ಕಿ ಒಡೆಯರ್ ಅವರು ಅಭಿಮಾನದಿಂದ ಕರ್ನಾಟಕ ಕಹಳೆ ಕುರಿತು ರಚಿಸಿರುವ ಕವಿತೆಗೆ ಹಗರಿಬೊಮ್ಮನಹಳ್ಳಿಯ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಅವರು ರಾಗ ಸಂಯೋಜಿಸಿ‌ ಹಾಡಿದ್ದಾರೆ. ಓದಿ ಕೇಳಿ ಸಂತೋಷಿಸಲು ವಿನಂತಿ.🌺💐
(ಸಂಪಾದಕರು)

ಕರ್ನಾಟಕ ಕಹಳೆ

ಕರ್ನಾಟಕದ ಕಹಳೆ
ಮೊಳಗುತ್ತಿದೆ ಬಾನಿನೆಡೆ
ಧ್ವನಿಸುತ್ತಿದೆ ಎಲ್ಲೆಡೆ !
ಹೊಸ – ಹೊಸ ಅವಿಷ್ಕಾರವ
ತನ್ನೊಡಲಿನಿಂದ ಹೊರ ಚಿಮ್ಮುತ್ತಿದೆ
ಕರುನಾಡ ಕಂಪನು
ಸುತ್ತಲೂ ಪಸರಿಸುತ್ತಿದೆ !
ವ್ಯಕ್ತಿಯ ಪರಿಚಯ
ಪ್ರಬುದ್ಧ ಲೇಖನ
ದಿನ ನಿತ್ಯ ನಡೆಯುವ
ಚಿತ್ರಣ
ಎಲ್ಲವೂ ನಿನ್ನಲ್ಲಡಗಿದೆ
ಸಮೃದ್ಧಿಯ ಹೂರಣ !
‘ ಅನುದಿನ ‘
ಕವನ , ಹನಿಗವನಗಳ ಮೂಲಕ
ಕವಿ, ಕವಿಯತ್ರಿಯರನ್ನು
ಪರಿಚಯಿಸುವ ಪರಿ
ಎನಿತು ಬಣ್ಣಿಸಲಿ
ನಿನ್ನ ವೈಖರಿ !
ಹೆಂಗಳೆಯರ ಮನೆಯಂಗಳದ
ಚಿತ್ತಾರದ ರಂಗವಲ್ಲಿ
ಕಹಳೆಯಲ್ಲಿ ಮಿನುಗುತಿರಲಿ
ನಗು ಬೀರುತಿರಲಿ !
ಕಹಳೆಯನ್ನು ಕೈ ಹಿಡಿದು
ನಡೆಸುವ ನಾವಿಕ
” ಸಂಸ್ಕೃತಿ ಪ್ರಕಾಶನ ” ದ
ಪ್ರಕಾಶಕ
ನಿತ್ಯ – ನಿರಂತರ
ಬೆಳಗಲಿ – ಮೊಳಗಲಿ
ಈ ಕಹಳೆ
ಇದು ಕರ್ನಾಟಕದ
ಕಹಳೆ

-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ

ರಾಗ ಸಂಯೋಜನೆ-ಗಾಯನ:                             ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

*****