ಅನುದಿನ‌ ಕವನ-೬೯೯, ಕವಿ: ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಮಕ್ಕಳ‌ಗಜಲ್

ಮಕ್ಕಳ ಗಜಲ್

ಮಕ್ಕಳ ಮನದಲಿ ಕನಸು ಮೊಳೆಯಲು ಬಿಡಿ
ಗೆಳೆಯರಲಿ ಕುಣಿದು ಹರಟುತ ನಗಲು ಬಿಡಿ.

ಜಿಟಿಜಿಟಿ ಮಳೆಯ ಖುಷಿಗೆ ನಲಿಯಲು ಬಿಡಿ
ಬಣ್ಣದ ಚಿಟ್ಟೆಯ ಮೋಹಕೆ ಕರಗಲು ಬಿಡಿ.

ಕಾಗದದ ದೋಣಿ ನೀರಲಿ ಹರಿಸಲು ಬಿಡಿ
ತಣ್ಣನೆಯ ಗಾಳಿಗೆ ಹಗೂರಕೆ ತೇಲಲು ಬಿಡಿ.

ಹಿರಿಯರ ಜತೆ ಕಥೆ ಕೇಳಲು ಬಿಡಿ
ಪುಸ್ತಕ ಕೆಡವಿ ಹಾಳೆ ಹರಿಯಲು ಬಿಡಿ.

ಮರಳಲಿ ಮನೆ ಕಟ್ಟಿ ಕೆಡವಲು ಬಿಡಿ
‘ದಿನ್ನಿ ‘ ಒಲುಮೆಯ ಹೂಗಳ ಅರಳಲು ಬಿಡಿ.

-ದಸ್ತಗೀರಸಾಬ್ ದಿನ್ನಿ, ಬಳ್ಳಾರಿ

*****