ಬುದ್ದ ಇನ್ನೂ ಅರ್ಥವಾಗಿಲ್ಲ….!
ಮೇಲುಕೀಳಿನ
ಅಸಹ್ಯವೆಲ್ಲವ
ತಲೆಗೇರಿಸಿಕೊಂಡು
ಜಾತಿಪಿತ್ತವ ಮುಡಿಕಟ್ಟಿಕೊಂಡು
ನಲ್ಲಿ ತೊಂಬೆ ತೊಳೆದು ಸ್ವಚ್ಛಗೊಳಿಸಿ
ಶುದ್ದವಾದವೆಂದ ಕೊಳಕು
ಮನುಷ್ಯರಿಗೆ ನೀನು
ಅರ್ಥವಾಗುವುದಿಲ್ಲ ಗುರುವೆ….
ನಿನ್ನ
ಅನುಸರಿಸುತ್ತೇವೆಂದು
ನೆಪಮಾತ್ರಕ್ಕೆ ಬೊಗಳೆ ಬಿಡುವ
ಸಿದ್ದಾಂತಿಗಳಿಗೆ
ಭಾಷಣ ಮುಗಿಯುತ್ತಿದಂತೆ
ಬಣ್ಣಮಾತು ಬದಲಿಸುವವರಿಗೆ ನೀನು
ಅರ್ಥವಾಗುವುದಿಲ್ಲ ಗುರುವೆ….
ಸುಮ್ಮನೆ ಕಣ್ಮುಚ್ಚಿ
ನಿನ್ನ ನೆನೆದು ಧ್ಯಾನಿಸಿ
ನನ್ನ ಜನರಿಂದ
ಕಿಲೋ ಮೀಟರ್ ಗಟ್ಟಲೆ
ದೂರವೆ ನಿಂತು
ಕಷ್ಟಕೇಳದ
ಮುಂದುವರೆದವರಿಗೆ ನೀನು
ಅರ್ಥವಾಗುವುದಿಲ್ಲ ಗುರುವೆ….
-ಸಿದ್ದುಜನ್ನೂರ್, ಚಾಮರಾಜ ನಗರ.
*****