ಜೋಗಿನಕಟ್ಟಿ ಪ್ರಿಯಾಂಕಗೆ ಹಂಪಿ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಹಗರಿಬೊಮ್ಮನಹಳ್ಳಿ, ಡಿ.5: ಪಟ್ಟಣದ ಜೋಗಿನಕಟ್ಟಿ ಪ್ರಿಯಾಂಕ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ.
ಪ್ರಿಯಾಂಕ ಅವರು ವಿವಿಯ ಕನ್ನಡ ಭಾಷಾಧ್ಯಯನ
ವಿಭಾಗಕ್ಕೆ ಸಲ್ಲಿಸಿದ “ಹೈದ್ರಾಬಾದ್-ಕರ್ನಾಟಕ ಪ್ರದೇಶದ ದೇಸಿ ಆಟಗಳು:ಭಾಷಿಕ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ‌ನೀಡಿ ಪುರಸ್ಕರಿಸಿದೆ.
ಭಾಷಾ ನಿಕಾಯದ ಪ್ರಾಧ್ಯಾಪಕ ಡಾ.ಪಿ.ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕಾ ಅವರು ಮಹಾ ಪ್ರಬಂಧ ಸಿದ್ಧಪಡಿಸಿ ವಿವಿಗೆ ಸಲ್ಲಿಸಿದ್ದರು.
ಪಟ್ಟಣದ ಎಪಿಎಂಸಿ ಮಾಜಿ ಅಧ್ಯಕ್ಷ ಜೆ.ಯೋಗಾನಂದ ಮತ್ತು ಜೆ. ಸುನೀತಾ ದಂಪತಿಯ ಪುತ್ರಿ ಪ್ರಿಯಾಂಕ ಅವರ ಸಾಧನೆಗೆ ಹಲವು ಗಣ್ಯರು ಅಭಿನಂದನೆ‌ ಸಲ್ಲಿಸಿದ್ದಾರೆ.
ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ
ಸಿ.ಮಂಜುನಾಥ್, ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು, ಕರ್ನಾಟಕ‌ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದರೋಜಿ ಅಶ್ವ ರಾಮಣ್ಣ ಮತ್ತಿತರರು ಅಭಿನಂದಿಸಿದ್ದಾರೆ.


*****