ಕೊಪ್ಪಳದ ಜೀವನಸಾಬ್ ವಾಲಿಕಾರ್ ಗೆ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಕೊಪ್ಪಳ, ಡಿ.6: ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಜೀವನಸಾಬ್ ವಾಲಿಕಾರ್ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ.


ಜೀವನಸಾಬ್ ವಾಲಿಕಾರ್ ಅವರು ವಿವಿಯ ಜಾನಪದ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ಜನಪದ ಸಾಹಿತ್ಯದಲ್ಲಿ ಹಾಸ್ಯದ ನೆಲೆಗಳು ಎನ್ನುವ ಸಂಶೋಧನಾ ಮಹಾ ಪ್ರಬಂಧವನ್ನು ಪುರಸ್ಕರಿಸಿ ಡಾಕ್ಟರೇಟ್‌ ಪದವಿ ನೀಡಿದೆ.
ಹಗರಿಬೊಮ್ಮನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.‌ಸತೀಶ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ವಾಲಿಕಾರ್ ಅವರು
ಮಹಾ ಪ್ರಬಂಧ ಸಿದ್ಧಪಡಿಸಿ ವಿವಿಗೆ ಸಲ್ಲಿಸಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿರುವ ಜೀವನಸಾಬ್ ವಾಲಿಕಾರ್ ಅವರು ಜಾನಪದ ಗಾಯಕರು ಹೌದು. ರಾಜ್ಯ, ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ತಮ್ಮ‌ ಜಾನಪದ ಗಾಯನ, ಹಾಸ್ಯ ಭಾಷಣಗಳ ಮೂಲಕ  ಗಮನ ಸೆಳೆದಿದ್ದಾರೆ.
ಅಭಿನಂದನೆ: ಕಡುಬಡತನ ಲೆಕ್ಕಿಸಿದೇ ಉನ್ನತ‌ಮಟ್ಟದ ಶಿಕ್ಷಣ ಪಡೆದು ಸಾಧನೆಗೈದ ವಾಲಿಕಾರ್ ಅವರನ್ನು
ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಸಿ.ಮಂಜುನಾಥ್,  ಹಂಪಾಪಟ್ಟಣದ‌ ಚರಕ ಅಭಿವೃದ್ಧಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಿ.ಶಿವಾನಂದ,  ಉಪನ್ಯಾಸಕ ಅಂಬಳಿ ವೀರೇಂದ್ರ,  ಜನನಿ ಸೇವಾ ಟ್ರಸ್ಟ್‌ನ ಅಂಬಳಿ ಕೇಶವಮೂರ್ತಿ ಮತ್ತಿತರರು ಅಭಿನಂದಿಸಿದ್ದಾರೆ.


*****