ಅನುದಿನ‌ ಕವನ-೭೧೭, ಕವಯಿತ್ರಿ:ದೀಪದ ಮಲ್ಲಿ, ಬೆಂಗಳೂರು

ಇನ್ನೊಮ್ಮೆ
ರೆಕ್ಕೆಬಡಿದು ಹಾರಿಬಿಡು
ಆದದ್ದಾಗಲಿ!

ಅವರ ಬಳಿ ಇರುವುದು
ಅವವೇ ಸವಕಲು ಹಣೆಪಟ್ಟಿ
ಮತ್ತು ಹೊಸ ಗೋಂದು

ದೂರಕ್ಕೆ ಬಲು ಎತ್ತರಕ್ಕೆ ಹಾರುವಾಗ
ಇಲ್ಯಾರಿಗೂ ನಿನ್ನ ಹಣೆಪಟ್ಟಿ ಕಾಣುವುದೇ ಇಲ್ಲ

ತಿಳಿ
ಹಣೆಗಿಂತಲೂ ವಿಶಾಲ
ಬದುಕು


-ದೀಪದ ಮಲ್ಲಿ, ಬೆಂಗಳೂರು
*****