ಅನುದಿನ ಕವನ-೭೨೦, ಕವಿ:ಅರಳಿ ನಾಗಭೂಷಣ, ಗಂಗಾವತಿ ಕವನದ ಶೀರ್ಷಿಕೆ: ನಾಗಜಯನ ಚೌಪದಿಗಳು

ನಾಗಜಯನ ಚೌಪದಿಗಳು

ನಗು ಬದುಕಿನ ಅವಿರ್ನಾಭಾವ.
ನಗುವಿನ ಅತೀಯತೆ ಬಂಧಗಳ ವಿಸಂಗವು
ದ್ರೌಪದಿಯ ಎರಡು ನಗುವಿನಂತರದೀ ಮಾನಪಹರಣ ,
ಊರುಭಂಗವೆ ನೆಡೆದಿತ್ತು ನೋಡಾ ನಾಗಜಯ.

ಕಣ್ಣು ಚಲಿಸುವುದಿಲ್ಲ ; ತನ್ನದೇ ಪಥದಲ್ಲದರ ಇರುವು
ಸೂರ್ಯನೂ ಚಲಿಸುವುದಿಲ್ಲ ;ತನ್ನದೇ ಪಥದಲ್ಲದರ ಇರುವು
ಕಪ್ಪು- ಬಿಳುಪಿನ ; ಹಗಲು – ರಾತ್ರಿ ನಿರ್ಣಯಕ್ಕಿವೆ ವರವು.
ಇವು ಚಲನಶೀಲಕೆ ಪ್ರಕೃತಿಕೊಡುಗೆ ನೋಡಾ ನಾಗಜಯ

ಸೂರ್ಯನ ನಿಜ ಸಂಗಾತಿ ವರುಣ
ಕಣ್ಣಪಾಪಿಯ ಸಂಗಾತಿ ಜಲದ ಆವರಣ
ಕಾಲನಿರ್ಣಯಕೆ ; ಬಾಳ ಸುಗಮ ಪಯಣಕೆ
ಎರಡೂ ಬದುಕ ದಿಕ್ಸೂಚಿ ನೋಡಾ ನಾಗಜಯ.

ನೆಡೆ ನನ್ನದು , ನುಡಿ ನನ್ನದು ,
ನಡುವೆ ಕಾಡುವ ಭಾವವೂ ನನ್ನದು ,
ನನ್ನದರ ಜೊತೆ ಶಿವನಿರಿಸಿದ ಪ್ರಾಣವದು ;
ಬಯಲ ದೀಪವಾಗಿದೆ ನೋಡಾ ನಾಗಜಯ.

ತಿಳಿಯ ನೀರಿನ ಊಟಿ ನದಿಯಾಯಿತ್ತು
ತಳೆದ ತಳಿರದು ಮಹಾ ವೃಕ್ಷವಾಗಯಿತ್ತು
ನೀರು ಬಗ್ಗಡವಾಗೆ ತಳಿರಿಗದು ಆಹಾರವಾಗಿತ್ತು.
ಮನುಜ ನೀ ಅದನು ತಿಳಿದು ನೋಡಾ ನಾಗಜಯ.


-ಅರಳಿ ನಾಗಭೂಷಣ, ಗಂಗಾವತಿ.
*****