ಜಲಜೀವನ ಮಿಷನ್ ಯೋಜನೆಯ ತರಬೇತಿ ಸದುಪಯೋಗಪಡಿಸಿಕೊಳ್ಳಿ – ಚಂದ್ರಶೇಖರ ಗುಡಿ

ಬಳ್ಳಾರಿ, ಡಿ.23: ಜನಕಲ್ಯಾಣ ಸಮಿತಿ ಉತ್ತಮ ತರಬೇತಿ ಹಮ್ಮಿಕೊಂಡಿದ್ದು, ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯಯೋಜನಾಧಿಕಾರಿ ಚಂದ್ರಶೇಖರಗುಡಿ ಹೇಳಿದರು.


ನಗರದ ಖಾಸಗಿ ಹೋಟಲ್‌ನಲ್ಲಿ ಜನಕಲ್ಯಾಣ ಸಂಸ್ಥೆ ಗ್ರಾಮ ಪಂಚಾಯಿತಿ ಸದ್ಯಸರಿಗೆ ಹಾಗೂ ಗ್ರಾಮ ನೀರು, ನೈರ್ಮಲ್ಯ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ವಸತಿ ತರಬೇತಿ ಹಾಗೂ ಪ್ರವಾಸ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವರೆಲ್ಲರೂ ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೂಂಡಿದ್ದು ಸಂತಸ ಸಂಗತಿ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಂದ್ರನಾಥ ಮಾತನಾಡಿ, ತಾಲೂಕಿನಲ್ಲಿ ೨೬ ಕೆರೆಗಳಿದ್ದು, ಗ್ರಾಮಮಟ್ಟದಲ್ಲಿ ನೀರಿನ ಮಹತ್ವ ಬಗ್ಗೆ ತಿಳಿಸಬೇಕು. ಮನೆ ಮನೆಗೆ ಗಂಗೆ ಯೋಜನೆಯಿಂದ ಪ್ರತಿ ಕುಟುಂಬಗಳಿಗೆ ನೀರು ಬರುವುದು. ಈ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಈ ಯೋಜನೆ ಯಶ್ವಸಿಗೊಳಿಸಬೇಕಾದರೆ ವಿಡಬ್ಲೂಎಸ್‌ಸಿ ಮತ್ತು ಜನರ ಪಾತ್ರ ಮಹತ್ವವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಅಚುತ್ಯರಾವ್ ಮಾತನಾಡಿ, ಸರಕಾರವು ಜಲಜೀವನ ಮಿಷನ್ ಯೋಜನೆಗೆ ಜಾರಿಗೆ ತಂದಿದೆ. ಈ ಯೋಜನೆಯ ಯಶಸ್ವಿಯಾಗಲು ಎಲ್ಲರ ಪಾತ್ರ ಮುಖ್ಯವಾಗಿದೆ. ಈ ಯೋಜನೆ ೨೦೨೩ ಮಾರ್ಚ್ ರಳೂಗೆ ಪೂರ್ಣಗೊಳಿಸಬೇಕು. ಇರುವ ಕಡಿಮೆ ಅವಧಿಯಲ್ಲಿ ಎಲ್ಲರೂ ಸಕ್ರಿಯರಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜನಕಲ್ಯಾಣ ಸಂಸ್ಥೆ ನಿರ್ದೇಶಕ ಪ್ರಸೇನ ರಫ್ತಾನ್ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ರವೀಶ್, ಶೋಭಾ, ಜಲ್ಲಾ ಯೋಜನೆ ವ್ಯವಸ್ಥಾಪಕರು ಹೆಚ್.ತಿಪ್ಪೇಸ್ವಾಮಿ ವೆಂಕಟೇಶ ಇತರರಿದ್ದರು.
*****