ಅಪ್ಪಟ ಗ್ರಾಮೀಣ ರಂಗ ಪ್ರತಿಭೆ ಸಾಂಬಶಿವ ದಳವಾಯಿ -ಪುರುಷೋತ್ತಮ ಹಂದ್ಯಾಳ್ ಪ್ರಶಂಸೆ

ಬಳ್ಳಾರಿ, ಡಿ.24: ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ಭಾರತದ ಮೊದಲ ಪದವೀಧರ ಸಾಂಬಶಿವ ದಳವಾಯಿ ಅವರು ಅಪ್ಪಟ ಗ್ರಾಮೀಣ ರಂಗಪ್ರತಿಭೆ ಎಂದು ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಪ್ರಶಂಸಿಸಿದರು.

ಅವರು ಬೆಂಗಳೂರಿನ ಸಂಸ ಥಿಯೇಟರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಇವರ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಿದ್ದ “ಸಂಸ ರಂಗ ಪಯಣ” ಕಾರ್ಯಕ್ರಮದಲ್ಲಿ ಜನಪದ ಸರದಾರ ಸಾಂಬಶಿವ ದಳವಾಯಿ ಅವರೊಂದಿಗೆ ಸಂವಾದಿಸಿದರು.
ಸಾಂಬಶಿವ ದಳವಾಯಿ ಅವರು ಇವರ ರಂಗ ಪಯಣ ಯುವ ಕಲಾವಿದರಿಗೆ ಪ್ರೇರಣೆಯಾಗಿದೆ. ಬೀದಿ (ನಾಟಕ) ರಂಗಭೂಮಿಯ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಯಶಸ್ಸುಗೊಳಿಸಿದ ಕೀರ್ತಿ ಇವರದು. ಅನೇಕ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಅಭಿನಯಿಸಿದ್ದಾರೆ. ದಳವಾಯಿ ಅವರ ಬೀದಿ ನಾಟಕದ ಹಲವು ಹಾಡುಗಳು ಪ್ರತಿಯೊಂದು ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆಗಳಾಗಿವೆ ಎಂದು ಕೊಂಡಾಡಿದರು.


ಕಾರ್ಯಕ್ರಮವನ್ನು ಕಸಾಪ ಗ್ರಾಮೀಣ ವಿಧಾನಸಭಾ ಕ್ಷೇತ್ರ ಬಳ್ಳಾರಿ ಘಟಕದ ಅಧ್ಯಕ್ಷರ ಯರ್ರಿಸ್ವಾಮಿಯವರು ಉದ್ಘಾಟಿಸಿ ಮಾತನಾಡಿ, ಜಾನಪದ ಸೊಗಡು ಹಾಡು ಭಾಷೆ ಜನರ ಬದುಕಿನೊಂದಿಗೆ ಸಮ್ಮಿಲನಗೊಂಡಿದೆ ಎಂದರು. ರಂಗಭೂಮಿ ವಿಸ್ತಾರವಾಗಿ ಸಮಾಜಕ್ಕೆ ಹಬ್ಬಿದೆ ಎಂದು ಹಣೆಳಿದರು.
ಕನ್ನಡ ನಾಡು ನುಡಿಗೆ ಆದ್ಯತೆ ನೀಡಬೇಕು. ಮಾಧ್ಯಮಗಳ ಹಾವಳಿಯಲ್ಲಿ ಜಾನಪದ ಹಾಡುಗಳು ನಶಿಸಿ ಹೋಗುತ್ತಿವೆ. ಹಳೆ ಬೇರು ಹೊಸ ಚಿಗುರು ಎನ್ನುವಂತೆ ಜಾನಪದ ಹಾಡುಗಳನ್ನ ಬಳಸಬೇಕು.
ಕಲೆಯ ಜೊತೆಗೆ ಕಲಾವಿದರು ಉಳಿಯಬೇಕು ಹಾರ ತುರಾಯಿಗಳಿಗಿಂತ ಆಹಾರ ಕಲಾವಿದರಿಗೆ ಅಗತ್ಯ ಎಂದು ನುಡಿದರು.
ಸನ್ಮಾನ: ಸಾಂಬಶಿವ ದಳವಾಯಿ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಬಳಿಕ ಪುರುಷೋತ್ತಮ ಹಂದ್ಯಾಳು ಅವರು ಸಾಂಬಶಿವ ದಳವಾಯಿ ಅವರೊಂದಿಗೆ ರಂಗ ಪಯಣ ಕುರಿತು ಸಂವಾದ ನಡೆಸಿದರು.
ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಮಂಜುನಾಥ ಗೋವಿಂದವಾಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲಾವಿದರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿಷ್ಣು ಹಡಪದ ಸ್ವಾಗತಿಸಿದರು. ದುರ್ಗಮ್ಮ ಪ್ರಾರ್ಥಿಸಿದರು. ಸುರೇಶ್ ಸಿಎಂ ಪ್ರಾಸ್ತಾವಿಕ ಮಾತನಾಡಿದರು.
ಶಿವಶಂಕ್ರಪ್ಪ ವಂದಿಸಿದರು.
*****