ಅನುದಿನ ಕವನ: ೭೩೧, ಕವಿ-ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಬಾಬಾ ಸಾಹೇಬ

ಬಾಬಾ ಸಾಹೇಬರು…

ನಿಮ್ಮ ಹಾದಿ ತುಳಿಯದೆ ನಾನು
ಬದುಕಲಾರೆ ಬಾಬಾಸಾಹೇಬ
ಸಾಯುವವರೆಗೂ ನೀವು ತೋರಿದ ದಾರಿಯೇ
ನನ್ನ ಕಣ್ಣಿಗೆ ಕಾಣುವ ಗುರಿ
ಅದರಲ್ಲಿ ನನಗೆ ಸ್ಪಷ್ಟತೆ ಇದೆ ಬಾಬಾಸಾಹೇಬ…

ಬೀದಿಯಲ್ಲಿ ನಿಮ್ಮ ಕನಸುಗಳ ಮಾರುವವರು
ಇನ್ನೂ ಕೂಡ ನಿಮ್ಮ ಅರಿತಿಲ್ಲ ಬಾಬಾಸಾಹೇಬ
ಅವರಿಗೆ ಸ್ವಹಿತ ಕಾರ್ಯಸಾಧನೆ ಮುಖ್ಯ
ಬಾಬಾಸಾಹೇಬ…

ಆದರೂ ಬಾಬಾ ಸಾಹೇಬ…

ಒಂದಷ್ಟು ನಿಮ್ಮ ಋಣವುಂಡ ದಂಡು
ನಿಮ್ಮ ಕನಸನ್ನು ನನಸು ಮಾಡಲು
ಟೊಂಕಕಟ್ಟಿ ನಿಂತಿರುವುದು ಸುಳ್ಳಲ್ಲ ಬಾಬಾಸಾಹೇಬ

ಏನೇ ಕಷ್ಟ ಬಂದರೂ
ನಿಮ್ಮನ್ನೆ ನೆನೆವುದು
ನಿಮ್ಮ ಕನಸ ಸಾಕಾರಗೊಳಿಸಿ
ನನಸು ಮಾಡಲು
ಮಳೆ ಚಳಿ ಗಾಳಿ ಬಿಸಿಲು
ಅಷ್ಟೆ ಏಕೆ ಬಿರುಗಾಳಿಯನ್ನು ಲೆಕ್ಕಿಸದೆ
ಹಗಲು ರಾತ್ರಿ ಎಣಿಸದೆ ನಿಮ್ಮ ಗುರುಯೆಡೆಗೆ
ಜೋರು ನಡಿಗೆಯ ದೃಷ್ಟಿನೆಟ್ಟು ನಡೆಯುತಿಹರು ಬಾಬಾಸಾಹೇಬ…


-ಸಿದ್ದುಜನ್ನೂರ್, ಚಾಮರಾಜ ನಗರ
*****