ಶ್ರೀರಘೋತ್ತಮ ತೀರ್ಥರ ಆರಾಧನೆ, ಅದ್ದೂರಿ ರಥೋತ್ಸವ

ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿಮಠದಲ್ಲಿ ರಘೋತ್ತಮ ತೀರ್ಥರ ಆರಾಧನೆಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಆರಾಧನೆ ನಿಮಿತ್ತ ಶ್ರೀಮಠದಲ್ಲಿ ಬೆಳಿಗ್ಗೆ ಪಂಚವೃಂದಾನಗಳಿಗೆ ವಿಶೇಷ ಪೂಜೆ, ಅರ್ಚನೆ, ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.

    ಇದಕ್ಕೂ ಮುನ್ನ ನಡೆದ ರಥೋತ್ಸವಕ್ಕೆ ಶ್ರೀಮದುತ್ತರಾಧಿಮಠದ ಪಂ.ಪ್ರವೀಣ್ ಆಚಾರ್, ಪಂ.ನವೀನ್ ಆಚಾರ್, ಪಂ.ಶ್ರೀನಿವಾಸ್ ಆಚಾರ್ ಅವರು ಚಾಲನೆ ನೀಡಿದರು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ರಥೋತ್ಸವಕ್ಕೆ ಹೂವು, ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ನಾನಾ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ, ಶ್ರೀಹರಿನಾಮಸ್ಮರಣೆ, ನಡೆಯಿತು.

ಈ ಸಂದರ್ಭದಲ್ಲಿ ವಾದಿರಾಜ್ ಆಚಾರ್, ಗಿರಿ, ಸುದರ್ಶನ, ಆನಂದ್, ವರುಣ್, ಪ್ರಸನ್ನ, ಶ್ರೀನಿವಾಸ್, ಶ್ರೀನಿವಾಸ್ ಪಂಥ್, ಡಾ.ಶ್ರೀನಾಥ್, ಪ್ರದೀಪ್, ಪ್ರಸನ್ನ ಆಲೂರ್, ಸಂಜೀವ್, ಸುರೇಶ್ ಆಚಾರ್ ಸೇರಿದಂತೆ ನೂರಾರು ಭಕ್ತರು ಇತರರು ಉಪಸ್ಥಿತರಿದ್ದರು. ಸಂಜೆ ಪಂ.ಕಂಠಪಲ್ಲಿ ಸಮೀರ್ ಆಚಾರ್ ಅವರಿಂದ ಕೃಷ್ಣ ಗೀತಾ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಮಕ್ಕಳಿಂದ ಕೋಲಾಟ, ಭಜನೆ ಗಮನಸೆಳೆಯಿತು.