ನಾಳೆ ಬಳ್ಳಾರಿಯಲ್ಲಿ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ -ದರೂರು ಶಾಂತನಗೌಡ

ಬಳ್ಳಾರಿ, ಜ.೧೦: ನಗರದ ವೀವಿ ಸಂಘದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಜ.೧೨ ರಂದು ಗುರುವಾರ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವೀರಶೈವ ಕಾಲೇಜು ಆವರಣದಲ್ಲಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನ ಗೌಡ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ. ಮಂಜುನಾಥ ಅವರು ತಿಳಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾನಪದ ಸಂಕ್ರಾಂತಿ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಮತ್ತು ಪಪಂ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಬೆ.೧೧ ಗಂಟೆಗೆ ಉದ್ಘಾಟಿಸುವರು.
ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿಗಳು ಸಾನಿಧ್ಯ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ವಹಿಸುವರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಜಾನಪದ ಕ್ಷೇತದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಆರು ಜನ ಸಾಧಕರಿಗೆ ಜಾನಪದ ಪ್ರಶಸ್ತಿ ನೀಡಿ ಗೌರವಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ನಾಗೇಂದ್ರ, ಜೆ ಎನ್ ಗಣೇಶ್, ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯರಾದ ಅಲ್ಲಂ ಪ್ರಶಾಂತ್, ನಾರಾ ಭರತ್ ರೆಡ್ಡಿ, ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ತುಂಗಭದ್ರ ರೈತ ಸಂಘದ ದರೂರು ಪುರುಷೋತ್ತಮ ಗೌಡ, ಡಿಡಿಪಿಯು ಸುಗೇಂದ್ರ ಹೆಚ್. ಅವರು ಉಪಸ್ಥಿತರಿರುವರು.


ವಿಶೇಷ ಉಪನ್ಯಾಸ: ಹಂಪಿ ಕನ್ನಡ ವಿಶ್ವ ವಿದ್ಯಾಲಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ.ಚಲುವರಾಜು ಅವರು  ಜಾನಪದ ಮೌಲ್ಯಗಳು ಮತ್ತು ಲೋಕದೃಷ್ಠಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ವೀವಿ ಸಂಘದ ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ ಬಸವರಾಜ, ಕೋಶಾಧಿಕಾರಿ ಗೋನಾಳು ರಾಜಶೇಖರ ಗೌಡ, ವೀರಶೈವ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಸುಜಯೀಂದ್ರ ಗೌತಮ್, ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಕೆ.ಸಿ ಸಜ್ಜನ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ ವೀರನಗೌಡ, ಸಿದ್ಮಲ್ ಮಂಜುನಾಥ್, ಬಜ್ಜಪ್ಪನವರ ಅಮರೇಶ್, ವೀರೇಶ್ ಗಂಗಾವತಿ, ಕರೇಗೌಡರು ಮತ್ತು ಡಿ.ವಿಶ್ವನಾಥ್ ಉಪಸ್ಥಿತರಿರುವರು.
ಜಾನಪದ ರತ್ನ ಪ್ರಶಸ್ತಿ: ಜಾನಪದ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಶಿವೆಶ್ವರ ಗೌಡ ಕಲ್ಲುಕಂಬ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿ ಅಶ್ವರಾಮಣ್ಣ, ಕುರುಗೋಡು ತಾಲೂಕಿನ ಬಸಾಪುರ ಗ್ರಾಮದ ಜಾನಪದ ಗಾಯಕಿ ಬಸಾಫುರ ಹುಲಿಗೆಮ್ಮ, ಕಂಪ್ಲಿಯ ಸಿಂದೋಳ್ ಕುಣಿತ ಕಲಾವಿದ ರಾಹುಳ್ ನಾಗಪ್ಪ, ಸಿರುಗುಪ್ಪದ ತತ್ವಪದಕಾರ ದಳವಾಯಿ ಈರಣ್ಣ ಮತ್ತು ಜಾನಪದ ಯುವ ಗಾಯಕ ಚಿಗುರು ಹುಲುಗಪ್ಪ ಅವರು ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ದರೂರು ಶಾಂತನಗೌಡ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗುವುದು.


ಮೆರವಣಿಗೆ: ಉತ್ಸವದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮದ ಮೆರವಣಿಗೆ ನಗರದ ಕುಮಾರಸ್ವಾಮಿ ದೇವಸ್ಥಾನದಿಂದ ವಿದ್ಯಾನಗರದ ಮೂಲಕ ವೀರಶೈವ ಕಾಲೇಜು ಆವರಣ ತಲುಪಲಿದೆ ಎಂದು ಸಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಅಶ್ವರಾಮು ಮತ್ತು ಸಂಘಟನಾ ಕಾರ್ಯದರ್ಶಿ ಹೇಮಾ ಮಂಜುನಾಥ್ ಅವರು ಎಲ್ಲಾ ಜಾನಪದ, ಸಾಹಿತ್ಯ ಪ್ರಿಯರನ್ನು ಆಹ್ವಾನಿಸಿದ್ದಾರೆ.
*****