ಅನುದಿನ‌‌ ಕವನ-೭೪೪, ಕವಿ:ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ಅಪ್ಪ….

ಅಪ್ಪ….

ನನ್ನ ಏಳಿಗೆ ನೂರು
ನೋವಂತು ಇಲ್ಲ ಚೂರು
ಗೆಲುವೆ ನನ್ನ ದಾರಿಗೆ ಇವರು
ಸೋಲನು ಮೆಟ್ಟುವ ತಾಕತ್ತು ಇವರು
ಅದೃಷ್ಟದ ಗುರುತಾದರು
ನಮ್ಮಯ ಮನೆ ದೇವರು
ಕಾಯುವ ಹಗಲು ಇರುಳು
ದಿನವೂ ಇವರು ನೆರಳು
ಅಪ್ಪ…ಅಪ್ಪ…ವಿಶಾಲ ಆಲಯ
ಅಪ್ಪ…ಅಪ್ಪ…ನೀನೆ ಒಂದು ದೇವಾಲಯ…

ಪ್ರತಿದಿನ ಪ್ರತಿಕ್ಷಣ ತನ್ನನೆ ಮರೆತನಿಲ್ಲಿ
ಮಗುವನು ನೋಡುತಾ ನೂರು ಸಂತೋಷದಲ್ಲಿ
ತೇಲುವ ಮುಗಿಲು ಅಪ್ಪ
ಹರುಷದ ಹೊಂಬೆಳಕು ಅಪ್ಪ
ಮಳೆಯಲ್ಲೂ ಚಳಿಯಲ್ಲೂ
ಜೊತೆನಿಲ್ಲೊ ಕಾವಲುಗಾರ
ಅಪ್ಪ ನನ್ನಪ್ಪ ನೀಗುವ ಎಲ್ಲ ದುಃಖ
ಕಾಯುವ ಸನಿಹ ನಿಂತು ದಿನವು ಪಕ್ಕ…

ಯಾರು ಏನೆ ಅಂದರು ಬಿಡದೆ ಕಾಯಕ
ಓಡೋಡಿ ಬಳಿ ಬಂದು ಮುದ್ದಾಡುವ ಭಾವುಕ
ತನ್ನಯ ನೋವಿಗೆ ಅಪ್ಪ
ತಾನೆ ಮುಲಾಮು ಅಪ್ಪ
ನೊಂದರು ಬೆಂದರು
ಕಣ್ಣೀರಿಗೂ ಪಾಲುದಾರ
ಅಪ್ಪ ನನ್ನಪ್ಪ ಕತ್ತಲ ದಾರಿಗೆ ಶಾಶ್ವತ
ಬೆಳಕಾಗುತ ನಿಂತವನೆ ಬ್ರಹ್ಮಾಂಡ ಸೂರ್ಯ…

-ಸಿದ್ದುಜನ್ನೂರ್, ಚಾಮರಾಜ ನಗರ

*****