ಅನುದಿನ ಕವನ-೭೫೦, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ:ಮನುಜಮತ ವಿಶ್ವಪಥ

ಮನುಜಮತ ವಿಶ್ವಪಥ

ಜೀವವು ಒಂದೇ , ಜೀವನ ಒಂದೇ
ಮೂಲಭೂತ ಆಸೆ ಆಕಾಂಕ್ಷೆಗಳು
ಮಾನವ ಕುಲಕೋಟಿಗೂ ಒಂದೇ .

ಭೂಮಿ ಆಗಸವು ಒಂದೇ
ನೇಸರ ಚಂದಿರರ ಬೆಳಕೊಂದೇ
ಸೃಷ್ಟಿ ತಾರೆ ಪಂಚಭೂತಗಳು
ಜೀವ ಸಂಕುಲಗಳಿಗೆ ಒಂದೇ.

ಜನನ ಪ್ರಕ್ರಿಯೆಯು ಒಂದೇ
ಮರಣ ಎಂಬುದು ಒಂದೇ
ಬದುಕಿ ಬಾಳುವ ಹೆಜ್ಜೆಗಳು
ಮನದ ಅರಿಷಡ್ವರ್ಗ ಗುಣಗಳೊಂದೇ.

ಕಾಯದ ಆಕಾರವು ಒಂದೇ
ನರನಾಡಿಯ ರಕ್ತವು ಒಂದೇ
ಕಂಡರೂ ಬೆಳವಣಿಗೆಯಲ್ಲಿ ಭಿನ್ನತೆಗಳು
ಬೆಳವ ಅವಸ್ಥೆಗಳು ಒಂದೇ.

ಹಸಿವು ಬಾಯಾರಿಕೆ ಒಂದೇ
ಚಯಾಪಚಯ ಕ್ರಿಯೆಯು ಒಂದೇ
ತಾಗುವ ರೋಗ ರುಜಿನಗಳು
ನರ ಜನ್ಮಕ್ಕೆಲ್ಲಾ ಒಂದೇ.

ಎಲ್ಲಾ ಇರುವಾಗಲೂ ಒಂದೇ
ಮೇಲುಕೀಳಿನ ಹಂಗ್ಯಾಕೊ ತಂದೆ
ಮನುಜರೆಲ್ಲ ಒಂದಾಗಿ ಬಾಳದಿರಲು
ಈ ಜೀವನ ಯಾಕೋ ಮುಂದೆ.

ಭಿನ್ನತೆ ತೊರೆಯಬೇಕು ಇಂದೇ
ಮಾನವ ಕುಲವದು ಒಂದೇ
ಐಕ್ಯತೆ ಮೆರೆಯಲಿ ಜಗದೊಳಗೆ
ಅರಿತು ನಡೆದವರಿಗೆ ಶರಣೆಂಬೆ.

✍️ -ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ

*****