ಬಳ್ಳಾರಿ ಉತ್ಸವ ದಲ್ಲಿ ಸಂಘ ಸಂಸ್ಥೆಗಳಿಗೆ ಆಹ್ವಾನವಿಲ್ಲ. -ಗುಲ್ಬರ್ಗಾ ವಿವಿ ಮಾಜಿ ಸೆನೆಟ್-ಸಿಂಡಿಕೇಟ್ ಸದಸ್ಯ ಕೆ ಎಂ ಮಹೇಶ್ವರಸ್ವಾಮಿ ಆಕ್ರೋಶ

‘ಬಳ್ಳಾರಿ ಉತ್ಸವ ದಲ್ಲಿ
ಸಂಘ ಸಂಸ್ಥೆಗಳಿಗೆ ಆಹ್ವಾನವಿಲ್ಲ’

ಪ್ರಥಮವಾಗಿ ಆರಂಭವಾಗಿರುವ
ಬಳ್ಳಾರಿ ಉತ್ಸವಕ್ಕೆ ಕಾರಣಿಭೂತರಾದ ಕರ್ನಾಟಕ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಬಿ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಶಾಸಕ  ಸೋಮಶೇಖರ್ ರೆಡ್ಡಿಹಾಗೂ ಜಿಲ್ಲಾ ಆಡಳಿತಕ್ಕೆ ಅಭಿನಂದನೆಗಳು.

ಪ್ರಪ್ರಥಮವಾಗಿ ಆಚರಿಸುತ್ತಿರುವ ಬಳ್ಳಾರಿ ಜಿಲ್ಲಾ ಉತ್ಸವಕ್ಕೆ ನಗರದ ಎಲ್ಲಾ ಸಂಘ ಸಂಸ್ಥೆಗಳಿಗೆ ಆಹ್ವಾನ ಪತ್ರಿಕೆ ಹಾಗೂ ವಿಐಪಿ ಪಾಸುಗಳನ್ನು ನೀಡದಿರುವುದು ದುರದೃಷ್ಟಕರ.

ಜನತಾ ಉತ್ಸವದಲ್ಲಿ ಸಂಘಟನೆಗಳು ಭಾಗವಹಿಸಿದಾಗ ಆ ಉತ್ಸವಕ್ಕೆ ಹೆಚ್ಚಿನ ಮೆರಗು ಬರುತ್ತದೆ.
ಈ ತಪ್ಪಿನ ಬಗ್ಗೆ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಮಂತ್ರಿಗಳು ಗಮನಹರಿಸಬೇಕಾಗಿ ಒತ್ತಾಯಿಸುತ್ತೇನೆ.
ನಿನ್ನೆ (ಜ.21)ದಿನದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಮಾಜಿ ಕಾರ್ಪೊರೇಟರ್ ಮಲ್ಲನಗೌಡ ಅವರ ಬಳಿ ಪಾಸ್ ಪಡೆಯಬೇಕಾಯಿತು
ಕಾರ್ಯಕ್ರಮದ ಒಳಗೆ ಹೋಗಲು ನನ್ನ ಜನಪರ ಹೋರಾಟದ ಹುದ್ದೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ಹೇಳಿದರು ಒಂದು ಗಂಟೆಯವರೆಗೆ ಗೇಟಿನಲ್ಲಿ ಕಾಯಬೇಕಾಯಿತು.
ನಗರ ಡಿಎಸ್ಪಿ ಅವರ ಕೃಪೆಯಿಂದ ಕಾರ್ಯಕ್ರಮದ ವೇದಿಕೆ ಮುಂಭಾಗಕ್ಕೆ ಬಂದಾಗ ಗಣ್ಯಾತಿ ಸಾಲಿನಲ್ಲಿ ಯಾವ ಗಣ್ಯರಿಗೂ ಸ್ಥಳಾವಕಾಶ ಇಲ್ಲದಾಗಿತ್ತು.
ಕುಳಿತಿರುವ ನಮ್ಮನ್ನು ನೀವು ಯಾರೆಂದು ಅಧಿಕಾರಿಗಳು ಪ್ರಶ್ನಿಸುತ್ತಿದ್ದರು. ಗಣ್ಯರಿಗಾಗಿ ಮೀಸಲಾದ ಸ್ಥಳದಲ್ಲಿ ಅಧಿಕಾರಿಗಳ ಕುಟುಂಬ ವರ್ಗದವರೇ ಸಾಕಷ್ಟು ಜನ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿರುವರು.

ಆದರೆ ಜನಸಾಮಾನ್ಯರು ವೇದಿಕೆ ಹತ್ತಿರ ಬರಲಾರದೆ ಪರದಾಡುತ್ತಿದ್ದರು. ಬಹಳಷ್ಟು ಜನರು ಎಲ್ಇಡಿ ಸ್ಕ್ರೀನ್ ನಲ್ಲೆ ಕಾರ್ಯಕ್ರಮ ವೀಕ್ಷಿಸಿ ಸಂತಸಪಟ್ಟಿರುವರು.
ಉತ್ಸವ ಎಂದರೆ ಎಲ್ಲ ಜನರಿಗೂ ಉತ್ಸವದ ಸವಿ ತಲುಪಲೇ ಬೇಕಾಗಿದೆ. ಇಂಥ ಉತ್ಸವದಲ್ಲಿ ಆಹ್ವಾನಿತ ಅತಿಥಿಗಳು ಪಕ್ಷಬೇಧ ಮರೆತು ತಪ್ಪದೆ ಭಾಗವಹಿಸಬೇಕಾಗಿ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಹಿರಿಯನಾಗರಿಕರು ಹಾಗೂ ಗಣ್ಯ ವ್ಯಕ್ತಿಗಳಿಗೆ ಸೂಕ್ತ ಗೌರವದ ಸ್ಥಳಾವಕಾಶ ಜಿಲ್ಲಾಡಳಿತ ಮಾಡಬೇಕಾಗಿ ಒತ್ತಾಯಿಸುತ್ತೇನೆ.

-ಕೆಎಮ್ ಮಹೇಶ್ವರ ಸ್ವಾಮಿ
ಮಾಜಿ ಉಪಾಧ್ಯಕ್ಷರು ವೀರಶೈವ ವಿದ್ಯಾವರ್ಧಕ ಸಂಘ,
ಮಾಜಿ ಸೆನೆಟ್- ಸಿಂಡಿಕೇಟ್ ಸದಸ್ಯರು ಗುಲ್ಬರ್ಗ ವಿಶ್ವವಿದ್ಯಾಲಯ,

ಮತ್ತು
ಅಧ್ಯಕ್ಷರು
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ,  ಬಳ್ಳಾರಿ