ಹಗರಿಬೊಮ್ಮನಹಳ್ಳಿ, ಜ.೨೪: ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣದಲ್ಲಿ ಜ.೨೪ರಂದು ಮಂಗಳವಾರ ಶ್ರೀ ಮಾತಾ ಸೇವಾಟ್ರಸ್ಟ್(ರಿ) ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಗ್ರಾಮದ ಶ್ರೀನಗರೇಶ್ವರ ದೇವಸ್ಥಾನದ ಆವರಣದಲ್ಲಿ ಬೆ. ೧೦-೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಮಾತಾ ಸೇವಾಟ್ರಸ್ಟ್ ನ್ನು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ನಿರ್ದೇಶಕರೂ ಆಗಿರುವ ಕೊಪ್ಪಳ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ಡಿ ಕುರುಗೋಡು ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಜಿ. ಶ್ರೀನಿವಾಸ ಶೆಟ್ಟಿ ಅವರು ವಹಿಸುವರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಸಿ.ಮಂಜುನಾಥ ಆಗಮಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯನಗರ ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆಗಿರುವ ನೆರಳು ಪತ್ರಿಕೆಯ ಸಂಪಾದಕ ಬುಡ್ಡಿ ಬಸವರಾಜ ಅವರು ಆಶಯ ನುಡಿಗಳನ್ನು ಆಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಂಪಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲ್ಲಾಹುಣಸಿ ನಾಗರಾಜ್, ಉಪಾಧ್ಯಕ್ಷೆ ಶ್ರೀಮತಿ ಹನುಮಕ್ಕ ಹುಲುಗಪ್ಪ , ಗ್ರಾಪಂ ಸದಸ್ಯರಾದ ಸಿ.ಎಲ್ ಕುಮಾರ್, ಎಸ್.ಗಾಳೆಪ್ಪ, ಎಸ್.ನಾಗರಾಜ ನಾಯಕರ, ಶ್ರೀಮತಿ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ತಿಪ್ಪಿಗುಂಡಿ ಮಂಜುನಾಥ್, ಶ್ರೀಮತಿ ಪತ್ರಿಗೀತಾ, ಶ್ರೀಮತಿ ಗುಬ್ಬೇರ ಮಂಜುಳ ಅಂಜಿನೆಪ್ಪ, ಆರ್ಯ ವೈಶ್ಯ ಸಂಘ, ಹಂಪಾಪಟ್ಟಣ ಆರ್ಯ ವೈಶ್ಯ ಸಂಘದ ಗೌರವಾಧ್ಯಕ್ಷ ಆರ್.ಜಿ ಬಸವರಾಜ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಜಿ.ತಿಮ್ಮಣ್ಣ, ಜಿಪಂ ಮಾಜಿ ಸದಸ್ಯ ಹೆಚ್.ಭೀಮಪ್ಪ, ಮಗಿಮಾವಿನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಪಿ.ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ಎಲಿಗಾರ ಕುಬೇರಪ್ಪ, ಜಿ.ಸತ್ಯನಾರಾಯಣ ಶೆಟ್ಟಿ, ಮಾರುತಿ ಭಜನಾ ಮಂಡಳಿ ಅಧ್ಯಕ್ಷ ಕಿಟಕಿ ಶಿವಣ್ಣ, ನೀಲಿಮೋಡ ಸಂಪಾದಕ ಕೆ ಟಿ ಮಂಜುನಾಥ, ವೀರಶೈವ ಸಮಾಜದ ಮುಖಂಡ ಪಿ.ಶಿವನಗೌಡ್ರು, ಸಹಿಪ್ರಾ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ಹೆಚ್.ಸೋಮನಾಥ್, ನವೋದಯ ಯುವಕ ಸಂಘದ ಅಧ್ಯಕ್ಷ ವಿ.ಹನುಮಂತ, ಕರವೇ ಗ್ರಾಮ ಘಟಕದ ಅಧ್ಯಕ್ಷ ಪೂಜಾರ ಸೋಮಣ್ಣ, ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿ.ಹನುಮಂತಪ್ಪ, ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ತಾಲೂಕು ಅಧ್ಯಕ್ಷ ಹಡಗಲಿ ಖಾಜಾಸಾಬ್ ಅವರು ಪಾಲ್ಗೊಳ್ಳುವರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಡಿ.ಗುರುರಾಜ ವಕೀಲರು, ಜಿ. ವೆಂಕಣ್ಣ ಶೆಟ್ಟಿ, ಪೂರ್ಮ ಶ್ರೀನಾಥ್, ಟಿ.ಮಹೇಂದ್ರ, ಮಾಧವಿ ಚಿದ್ರಿ, ಶ್ರೀನಿವಾಸ ಬಳಗನೂರು, ಎಸ್. ನಾಗೇಂದ್ರ, ವಿರೇಶ್ ವಿ, ಕರ್ಣಂ ಅನಂತರಾವ್, ಕಾತ್ರೀಕಿ ಶ್ರೀನಿವಾಸ್, ಹೆಚ್ ಎಂ ರಾಘವೇಂದ್ರ, ಬಾಬು ರಾಜೇಂದ್ರ ಪ್ರಸಾದ್, ಡಿಬಿಎಂ ಬಸವರಾಜ್, ಭರತ್ ಗಂಗಾವತಿ ಮತ್ತು ರಮೇಶ ದೇವರಂಗಡಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು.
ದಾಸರ ಪದಗಳು: ಇದೇ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಕುಸುಮ ಭಜನಾ ಮಂಡಳಿಯ ಶ್ರೀಮತಿ ಮಾಧವಿ ಚಿದ್ರಿ ಮತ್ತು ಸಂಗಡಿಗರು ದಾಸರ ಪದಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪ್ರಾರ್ಥನ ಗೀತೆಯನ್ನು ಗ್ರಾಮದ ಸರಸ್ವತಿ, ಜಿ ಸವಿತಾ, ವಿನುತ, ವೀರಮ್ಮ, ಸುಮಾ, ಸುಜಾತ ಅವರು ಹಾಡುವರು ಎಂದು ಟ್ರಸ್ಟ್ ಅಧ್ಯಕ್ಷ ಜಿ. ಶ್ರೀನಿವಾಸ ಶೆಟ್ಟಿ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ.
*****