ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ
ನೀವು ನೋಡಿದ್ದೀರಾ ಆ ಎಲೆಯನ್ನು?
ಊಲಲಲಾ ಎಂದು ಗಾಳಿಯಲ್ಲಿ
ನರ್ತಿಸುತ್ತಾ ಸಂತೋಷದಿಂದ
ಭೂಮಿಯನ್ನು ಅಪ್ಪಿಕೊಳ್ಳುತ್ತದೆ!
ಮಣ್ಣು ಮುದ್ದಿಸುತ್ತದೆ
ಬಂದೆಯಾ ಮುದ್ದೂ ಬಾ
ಕುಳಿತು ಕಳಿತು ಕಳೆಕಳೆಯಾಗಿ
ಬೆರೆತು ಗೊಬ್ಬರವಾಗೋಣ
ಮತ್ತೆ ಮರದ ಕಾಂಡದಲಿ ಏರಿ
ಹೊಸ ಚಿಗುರಿಗೆ ಜೀವ ತುಂಬೋಣ
ನೀನೂ ಇದ್ದೀಯ ಮನುಷ್ಯ
ಅಗಲುವಾಗ ಜೀವ
ಭೋರ್ಗರೆದು ಅಳುತ್ತೀಯ
ತೊಟ್ಟು ಕಳಚಿ ಬಿದ್ದ
ಪುಟ್ಟ ಎಲೆ ನಿನ್ನ ನೋಡಿ ನಗುತ್ತಿದೆ!
-ಬಿ.ಎಂ.ಹನೀಫ್, ಬೆಂಗಳೂರು
*****