ಹಲಕುಂದಿ ವಿಬಿಎಸ್ ಮಠ ಸಕಿಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಬಳ್ಳಾರಿ, ಜ.26: ತಾಲೂಕಿನ ಹಲಕುಂದಿ ವಿಬಿಎಸ್ ಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.


ಶಾಲೆಯ ಪ್ರಭಾರಿ ಮುಖ್ಯಗುರು ಮೀನಾಕ್ಷಿ ಕಾಳೆ ಅವರು ಧ್ವಜಾರೋಹಣ ನೆರವೇರಿಸಿದರು.
ಶಾಲೆ ದತ್ತು ಪಡೆದಿರುವ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಮಾತನಾಡಿ ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ರಚಿಸಿರುವ ಸಂವಿಧಾನ ದೇಶದ ಎಲ್ಲಾ ಪ್ರಜೆಗಳಿಗೂ ಸಮಾನತೆ ನೀಡಿದೆ. ದೇಶದ ಸಮಗ್ರ ಅಭಿವೃದ್ಧಿ ಮತ್ತು ಪ್ರತಿಯೊಬ್ಬರಿಗೂ ಕಾನೂನು ರಕ್ಷಣೆ ನೀಡುವುದು ಸಂವಿಧಾನದ ಆಶಯವಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸುವುದು ಮೂಲಭೂತ ಕರ್ತವ್ಯವಾಗಿದ್ದು ಪಾಲಿಸೋಣ ಎಂದರು.
ಸಂವಿಧಾನ ನೀಡಿರುವ ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.


ಮುಖ್ಯ ಅತಿಥಿ ಕದಸಂಸ ಜಿಲ್ಲಾ ಮುಖಂಡ ಹೆಚ್. ಲಾಲೆಪ್ಪ ಅವರು ಮಾತನಾಡಿ ಶಾಲೆಯ ಅಭಿವೃದ್ಧಿಗೆ ತಮ್ಮ ಹಾಗೂ ಕಾಲೋನಿಯ ಎಲ್ಲಾ ಮುಖಂಡರ, ಪಾಲಕರ ಸಹಕಾರವಿರುತ್ತದೆ. ಪತ್ರಕರ್ತ ಮಂಜುನಾಥ್ ಅವರು ಶಾಲೆಯನ್ನು ದತ್ತು ಪಡೆದಿರುವುದು ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ. ಬಸವರಾಜ್, ಸ್ಥಳೀಯ ಮುಖಂಡ ಓಂಕಾರಪ್ಪ, ಪಾಲಕರಾದ ಮರಿಸ್ವಾಮಿ, ಯರೆಪ್ಪ ಶಾಲೆಯ ಅತಿಥಿ ಶಿಕ್ಷಕಿಯರಾದ ಹೊನ್ನೂರಮ್ಮ, ಮಂಜುಳಾ, ಅಡುಗೆ ಸಹಾಯಕಿ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಗಣರಾಜ್ಯೋತ್ಸವದ ಮಹತ್ವದ ಕುರಿತು ಲಿಖಿತ ಭಾಷಣ ಓದಿ ಗಮನ ಸೆಳೆದರು.


ಚೇತನಾ, ಆವಂತಿಕಾ, ಚೈತ್ರ ಸೇರಿದಂತೆ ಹಲವು
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
*****