ಅನುದಿನ‌ ಕವನ: ೭೬೬, ಕವಿ:ದುರಾಹ, ಕೊಟ್ಟೂರು, ಕವನದ ಶೀರ್ಷಿಕೆ: ಕೋರಿಕೆ

ಕೋರಿಕೆ

ನಾನು ಕಣ್ಣೀರಲ್ಲಿ ಬರೆದ ಕವಿತೆಗಳ
ನಿನ್ನ ಹೆಸರಿನಲಿ ಪ್ರಕಟಿಸಲು
ಮೊದಲು ಅನುಮತಿ ಕೊಡು.

ಇಡೀ ಪುಸ್ತಕ ದುಃಖಭರಿತವಾಗಿದೆ;
ನೀನೊಂದು ಇದಕ್ಕೆ ಭರವಸೆಯ
ಮುನ್ನುಡಿ ಬರೆದು ಕೊಡು.

ನಾನು ಬಡ ಕವಿ ಮಾರಾಯಿತಿ,
ನಿನ್ನ ಮದುವೆ ಮಂಟಪದಲ್ಲೇ
ಕೃತಿ ಲೋಕಾರ್ಪಣೆಗೊಳಿಸಿ
ಉಪಕಾರ ಮಾಡು.

ಕೀರ್ತಿ, ಪದವಿ, ಹೆಸರನ್ನು
ಬೆನ್ನಿಗೆ ಕಟ್ಟಿಕೊಂಡ ಮಲಗಿದ
ಈ ಅತೃಪ್ತ ಜೀವಕ್ಕೆ
ನೀ‌ನೊಂದು ಹಿಡಿ ಮಣ್ಣು ಕೊಡು

-ದುರಾಹ (ಲೈನ್ಮನ್ ರಾಮಣ್ಣ,) ಕೊಟ್ಟೂರು