ಹೊಸಪೇಟೆ:ರಾಜ್ಯದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿವರ್ಷ ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್ ಭೈರಹನುಮಯ್ಯ ವಾರ್ಷಿಕ ಪ್ರಶಸ್ತಿಯನ್ನು ತಾಲೂಕಿನ ಮರಿಯಮ್ಮನಹಳ್ಳಿಯ ಹಿರಿಯ ವರದಿಗಾರ ಜಿ.ವಿ.ಸುಬ್ಬರಾವ್ ರವರಿಗೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್,ಶಿವಾನಂದಪಾಟೀಲ್,ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಪ್ರದಾನಮಾಡಿದರು. ವಿಜಯಪುರದಲ್ಲಿ ನಡೆದ ಎರಡು ದಿನಗಳ 37ನೇ ಪತ್ರಕರ್ತರ ರಾಜ್ಯಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕರ್ಯದರ್ಶಿ ಜೆ.ಸಿ.ಲೋಕೇಶ,ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶಚೂರಿ,ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ,ರಾಜ್ಯಸಮಿತಿ ಸದಸ್ಯ ವೆಂಕೋಬಪೂಜಾರ,ಜಿಲ್ಲಾ ಉಪಾಧ್ಯಕ್ಷರಾದ ಕಿಚಡಿಕೊಟ್ರೇಶ,ಬುಡ್ಡಿಬಸವರಾಜ,ಹಿರಿಯ ಪತ್ರಕರ್ತಅನಂತಜೋಷಿ,ಸಿ.ಪ್ರಕಾಶ,ಸಿ.ಕೆ.ನಾಗರಾಜ,ರಾಮಚಂದ್ರ ಪೂಜಾರ,ಕೆ.ನಾಗರಾಜ ಸೇರಿದಂತೆ ಇತರರಿದ್ದರು.