ಬಳ್ಳಾರಿ: ಎಸ್.ಎಸ್.ಎ ಸರಕಾರಿ ಪದವಿ ಕಾಲೇಜಿನಲ್ಲಿ ಮತದಾರರ ಜಾಗೃತಿ ಅಭಿಯಾನ

ಬಳ್ಳಾರಿ, ಫೆ.7: ಚುನಾವಣಾ ಮತಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮತದಾರರ ಜಾಗೃತಿ ಅಭಿಯಾನ ನಗರದ ಎಸ್.ಎಸ್.ಎ (ಶ್ರೀಮತಿ ಸರಳಾದೇವಿ ಎಸ್ ಅಗರವಾಲ್)ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿತು.


ಕಾಲೇಜು, ಸ್ವೀಪ್ ಸಮಿತಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಹೊಸದಾಗಿ ಮತದಾನ ಮಾಡುವ ಯುವಕ-ಯುವತಿಯರಿಗೆ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕೆಂದು ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಲಕ್ಷ್ಮಣ್ ಶೃಂಗೇರಿ ಹಾಗೂ ಇವಿಎಂ ನೋಡಲ್ ಅಧಿಕಾರಿಯೂ ಆಗಿರುವ ಕೈ ಮಗ್ಗ ಜವಳಿ ಉಪ ನಿರ್ದೇಶಕ ವಿಠ್ಠಲ್ ರಾಜ್ ಬಿ. ಮತ್ತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಐ. ಹೊನ್ನೂರ ಅಲಿ ಮತ್ತು ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕರು ಹಾಗೂ ಲೀಡ್ ಕಾಲೇಜಿನ ಮತದಾರರ ಸಂಚಾಲಕ ಡಾ. ವೈ. ಜನಾರ್ದನ್ ರೆಡ್ಡಿ ಮತ್ತು ವಿದ್ಯಾರ್ಥಿ ಶಿವರಾಜ್ ಅವರು ಭಾಗವಹಿಸಿ ಇವಿಎಂ ಪ್ಯಾಡ್ ಮೂಲಕ 150 ಹೊಸ ಮತದಾರರಿಗೆ ಪ್ರತ್ಯಕ್ಷವಾಗಿ ಮತದಾನ ಯಾವ ರೀತಿ ಚಲಾಯಿಸಬೇಕು ಹಾಗೂ ಇವಿಎಂ ಪ್ಯಾಡ್ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು.
*****