ಬಳ್ಳಾರಿ: ಹಲಕುಂದಿ ಬಳಿ ಆಟೋಗೆ ಕಾರು ಡಿಕ್ಕಿ: ಏಳು ಜನರಿಗೆ ಗಾಯ

ಬಳ್ಳಾರಿ, ಫೆ.13: ಸಮೀಪದ ಹಲಕುಂದಿ ವಿಬಿಎಸ್ ಮಠದ ಬಳಿ ಸೋಮವಾರ ಸಂಜೆ ಕಾರೊಂದು ಹಿಂಬದಿಯಿಂದ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ದಲ್ಲಿದ್ದ ಐವರು ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಏಳು ಜನರಲ್ಲಿ ಹಲಕುಂದಿ ಸಹಿಪ್ರಾ ಶಾಲೆಯ ಹಿರಿಯ ಶಿಕ್ಷಕಿ ಪುಷ್ಪಾವತಿ(೫೯) ಮತ್ತು ಮಠದ ಶಾಲೆಯ ಶಿಕ್ಷಕಿ ನಾಗವೇಣಿ(೩೨) ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಟಿಬಿ ಸ್ಯಾನಿಟೋರಿಯಂ ಬಳಿ ಇರುವ ವಿಮ್ಸ್ ಟ್ರಾಮಾಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತರೆ ಗಾಯಾಳುಗಳನ್ನು ಶಿಕ್ಷಕಿಯರಾದ ಕವಿತಾ, ಗಾಯತ್ರಿ, ಭಾಗ್ಯಮ್ಮ, ಆಟೋ ಚಾಲಕ ಹೊನ್ನೂರುಸ್ವಾಮಿ, ಶ್ರೀನಿವಾಸ ಕಾರಿನ ಪ್ರಯಾಣಿಕರಾದ ವೈಷ್ಣವಿ, ವೇಣುಗೋಪಾಲ ಎಂದು ಗುರುತಿಸಲಾಗಿದೆ.


ಸಂಜೆ ಶಾಲೆ ಬಿಟ್ಟ ಬಳಿಕ ಹಲಕುಂದಿ ಗ್ರಾಮದಿಂದ ಇತರೆ ಪ್ರಯಾಣಿಕರೊಂದಿಗೆ ಶಿಕ್ಷಕಿಯರು, ವಿಬಿಎಸ್ ಮಠದಿಂದ ಕೆಲವರು ಆಟೋ ಹತ್ತಿ ಬಳ್ಳಾರಿಗೆ ಬರುತ್ತಿರುವಾಗ ಹರಪನಹಳ್ಳಿಇಂದ ಆದೋನಿಗೆ ಹೋಗುತ್ತಿದ್ದ ಕಾರು ಚಾಲಕನ ಅಜಾಗರೂಕತೆಯಿಂದ ಹಿಂದಿನಿಂದ ಆಟೋಕ್ಕೆ ಡಿಕ್ಕಿ ಹೊಡೆಯುತ್ತಲೇ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*****