ಅನುದಿನ ಕವನ:೭೭೬, ಕವಯಿತ್ರಿ: ಮಳವಳ್ಳಿ ಡಾ.ನಾಗರತ್ನ, ಉಡುಪಿ ಕವನದ ಶೀರ್ಷಿಕೆ:ನನ್ನೊಲವು

ನನ್ನೊಲವು

ಯಾರಿಗಾಗಿ ಎಂದು ಹೇಳಲೇ ನನ್ನೊಲವನ್ನು
ಮುಡಿಯುವ ಹೂವಿಗಾಗಿಯೋ
ನೋಡುವ ಕಣ್ಣಿಗಾಗಿಯೋ
ಯಾರಿಗೆಂದು ಹೇಳಲಿ ನಾನು ಇಂದು

ಒಲವ ಮಳೆ ಸುರಿಸಿ ಪ್ರೀತಿಯ ಧಾರೆ ಎರೆದ
ನಿನಗಾಗಿ ನನ್ನ ಒಲವು ಎಂದು ಹೇಳಲೇ
ಮನದ ಮೂಲೆಯಲ್ಲಿ ಅವಿತು ಕುಳಿತಿರುವ
ನಿನ್ನ ಮೋಹಕ್ಕಾಗಿ ನನ್ನ ಒಲವು ಎಂದು ಹೇಳಲೇ

ನಾ ಕಾಡಿಗೆ ಹಚ್ಚುವಾಗ ಕಾಡುವ ನಿನ್ನ ನೆನಪಿಗೆ ನನ್ನ ಒಲವು ಎಂದು ಹೇಳಲೇ
ಕನ್ನಡಿಯಲ್ಲಿ ನಿನ್ನ ಬಿಂಬ ನೆನೆದು ಮುಗುಳು ನಗೆ ಬೀರುವ ನಗೆಯನ್ನು ನನ್ನ ಒಲವು ಎಂದು ಹೇಳಲೇ

ಸವಿನೆನಪು ಮೂಡುವ ಕನಸ್ಸಿಗಾಗಿ ನನ್ನ ಒಲವು ಎಂದು ಹೇಳಲೇ
ಕನಸ್ಸಿನ್ನಲ್ಲೂ ಕಾಡುವ ನಿನ್ನ ನೆನಪಿಗೆ ನನ್ನ ಒಲವು ಎಂದು ಹೇಳಲೇ
ನಾ ಕಂಡ ಕನಸ್ಸೆ ನನ್ನೆದುರು ಇರುವಾಗ
ಯಾರಿಗಾಗಿ ಎಂದು ಹೇಳಲಿ ನಾನಿಂದು

-ಮಳವಳ್ಳಿ ಡಾ.ನಾಗರತ್ನ, ಉಡುಪಿ