ಕವಿ ಪರಿಚಯ:
ಡಾ.ಎಸ್.ಬಿ. ಆಕಾಶ್ ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ
ಪೀರಾಪುರ ಗ್ರಾಮದ ಕೃಷಿ ಕುಟುಂಬದಲ್ಲಿ
ಜನಿಸಿದ್ಧಾರೆ. ಪ್ರಸ್ತುತ ಆರ್‌ಸಿಯು, ಬೆಳಗಾವಿ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ, ವಿದ್ಯಾರ್ಥಿ ಕಲ್ಯಾಣ ಡೀನ್, ಪ್ರಸಾರಾಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ತಮ್ಮ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಪೀರಾಪುರ ಗ್ರಾಮ ಮತ್ತು ಮುದ್ದೇಬಿಹಾಳಧಲ್ಲಿ ಪೂರೈಸಿದ್ದಾರೆ. ಪದವಿಯನ್ನು ಮಾತೋಶ್ರೀ ಗಂಗಮ್ಮ ವೀರಪ್ಪ ಚಿನ್ವರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1995 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯೊಂದಿಗೆ ಎಂ.ಕಾಂ ಪದವಿಯನ್ನು ಪಡಿದಿದ್ಧಾರೆ 2002 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡಿದಿದ್ಧಾರೆ. 1995 ರಿಂದ ಈವರೆಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಹದಿನಾರು ಡಾಕ್ಟರೇಟ್ ಪದವಿಗಳನ್ನು ನೀಡಲಾಗಿದೆ ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ವಿದೇಶಿ ಮೂಲದವರು ಆಗಿರುವುದು ವಿಶೇಷ. ಡಾ. ಆಕಾಶ್ ಅವರು 125 ಸಂಶೋಧನಾ ಪ್ರಬಂಧಗಳನ್ನು ಪ್ರತಿಷ್ಠಿತ ವೃತ್ತಿಪರ ನಿಯತಕಾಲಿಕಗಳಲ್ಲಿ ವಿವಿಧ ಕ್ಷೇತ್ರಗಳಾದ ಲೆಕ್ಕಪತ್ರ ನಿರ್ವಹಣೆ, ಮಾನವ ಸಂಪನ್ಮೂಲ, ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯಗಳ ಕುರಿತು ಪ್ರಕಟಣೆ ಮಾಡಿದ್ಧಾರೆ . ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ 80 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ತಮ್ಮ ಅಧ್ಯಾಪನಾ, ಸಂಶೋಧನೆ ಜತೆಗೆ ಇತ್ತೀಚೆಗೆ ಡಾ. ಅಶೋಕ್ ಅವರು ಕವನಗಳು, ಸಣ್ಣ ಕಥೆಗಳನ್ನು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಡಾ.ಅಶೋಕ್ ಅವರ ‘ಅಕ್ಷರದವ್ವ ಸಾವಿತ್ರಿಬಾಯಿ ಪುಲೆ’ ಕವಿತೆಯನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಇಂದು ಪ್ರಕಟಿಸುವ ಮೂಲಕ ಪ್ರೋತ್ಸಾಹಿಸುತ್ತಿದೆ.👇
ಅಕ್ಷರದವ್ವ ಸಾವಿತ್ರಿಬಾಯಿ ಪುಲೆ
ಅಕ್ಷರದ ಜ್ಯೋತಿ ನೀನವ್ವ
ಹೆಣ್ಣಿನ ಕುಲಕೆ ಬೆಳಕಾದೆವ್ವ
ಭಾರತೀಯ ಹೆಣ್ಣು ಕುಲದ
ಮೊದಲ ಶಿಕ್ಷಕಿ ನೀ ನಾದೆಯವ್ವ
ಅಕ್ಷರದವ್ವ ನೀ ನನ್ನವ್ವ
ಜೋತಿಬಾಫುಲೆ ಅವರ ತತ್ವಕ್ಕೆ
ಬದ್ಧವಾಗಿದ್ದೆಯವ್ವ, ಅವರು
ಹಾಕಿಕೊಟ್ಟ ಹಾದಿಯಲ್ಲಿ ನಡೆದೇಯವ್ವ, ಜನರ ಉದ್ದಾರವಾಗಲಿ
ಎಂದು ಕಷ್ಟ ಪಟ್ಟೆಯವ್ವ
ಅಕ್ಷರದವ್ವ ನೀ ನನ್ನವ್ವ
ಶಿಕ್ಷಣದಿಂದ ವಂಚಿತರು ಕಂಡು
ಮರುಗಿದೆಯವ್ವ , ಎಲ್ಲಾ ಜನರಿಗೂ ಶಿಕ್ಷಣ
ಸಿಗಲಿ ಎಂದು ಶಿಕ್ಷಕಿಯಾದೆಯವ್ವ
ಶಿಕ್ಷಣದ ಜನನಿ ನೀ ನನ್ನವ್ವ
ನಿಜರೂಪದಲ್ಲಿ ಸರಸ್ವತಿ ನಿನ್ನವ್ವ
ಅಕ್ಷರದವ್ವ ನೀ ನನ್ನವ್ವ
ಸ್ತ್ರೀ ಕುಲಕೆ ಬೆಳಕಾದೆಯವ್ವ
ಸ್ತ್ರೀಯರಿಗಾಗಿ ಶಾಲೆಗಳು ಪ್ರಾರಂಭಿಸಿ
ಶಿಕ್ಷಣ ಕ್ರಾಂತಿಗೆ ಬುನಾದಿ ಹಾಕಿದೆಯವ್ವ
ಮೂಡನಂಬಿಕೆ ಕಂದಾಚಾರ ಗೊಡ್ಡು
ಸಂಪ್ರದಾಯ ಹೆಣ್ಣಿನ ಶೋಷಣೆ , ಜಾತಿಯತೆ
ಕಂಡು ಮನನೊಂದೆಯವ್ವ ಅಕ್ಷರದವ್ವ ನೀ ನನ್ನವ್ವ
ಸಮಾಜದ ಅಸಮಾನತೆ ಕಂಡು
ಮರುಗಿದೆಯವ್ವ, ಶೋಷಿತ ಹೆಣ್ಣಿನ
ಪರಿಸ್ಥಿತಿ ಕಂಡು ದುಃಖ ಪಟ್ಟೆಯವ್ವ
ಇದನ್ನು ಹೋಗಲಾಡಿಸಲು ಶಿಕ್ಷಣ ಒಂದೆ
ಮದ್ದು ಎಂದೆಯವ್ವ ಅಕ್ಷರದವ್ವ ನೀ ನನ್ನವ್ವ
ಸ್ತ್ರೀಯರಿಗೆ ಶೂದ್ರರಿಗೆ
ಶಿಕ್ಷಣ ಕೊಡುವುದು ಅಧರ್ಮ
ಎಂದು ಬಿಂಬಿಸಿದ ಸಂಪ್ರದಾಯವಾದಿಗಳ
ಎದುರು ಗಟ್ಟಿಯಾಗಿ ನಿಂತು
ಶಿಕ್ಷಣ ಕೊಡುವ ಕಾಯಕ ಮಾಡಿಕೊಂಡೆಯವ್ವ
ಅಕ್ಷರದವ್ವ ನೀ ನನ್ನವ್ವ
ಹೆಜ್ಜೆ ಹೆಜ್ಜೆಗೂ ಅವಮಾನಕ್ಕೆ
ಒಳಗಾದೆಯವ್ವ
ಛಲ ಬಿಡದೆ ಶಿಕ್ಷಣ
ಕೊಡುವಲ್ಲಿ ಯಶಸ್ವಿಯಾದೆಯವ್ವ
ಅಕ್ಷರದವ್ವ ನೀ ನನ್ನವ್ವ
ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ
ಸತಿಸಹಗಮನ ಪದ್ದತಿ , ಕೇಶ ಮುಂಡನೆ
ವಿರುದ್ದ ಹೋರಾಟ ಮಾಡಿ ಸಮಾಜದ
ಜನತೆಗೆ ತಿಳಿಹೇಳಿದೆಯವ್ವ , ಇವು ಮನುಜ
ಕುಲಕೆ ಒಳ್ಳೆದಲ್ಲ ಎಂದು ಸಾರಿದೆಯವ್ವ
ಅಕ್ಷರದವ್ವ ನೀ ನನ್ನವ್ವ
ವಿಧವೆಯರಿಗ ಮರು ಮದುವೆ ಮಾಡಿಸಿದೆಯವ್ವ
ಮಹಿಳೆಯರಿಗೆ ಅಬಲಾಶ್ರಮ ಸ್ಥಾಪಿಸಿದೆ ಯವ್ವ
ಪೂಜಾರಿಗಳಿಲ್ಲದೆ ಮದುವೆ ಮಾಡಿಸಿ
ವೈಜ್ಞಾನಿಕತೆ ಮೆರೆದೆಯವ್ವ ಅಕ್ಷರದವ್ವ
ನೀ ನನ್ನವ್ವ
-ಡಾ ಎಸ್ ಬಿ ಆಕಾಶ್, ಬೆಳಗಾವಿ
*****